ಪತ್ರಕರ್ತನ ಬಳಿ ಲಂಚಕ್ಕೆ ಕೈವೊಡ್ಡಿದ ನ್ಯಾಯಾಲಯದ ನೌಕರರು ಎಸಿಬಿ ಬಲೆಗೆ

ಕೊಡಗು: ಲಂಚ ಸ್ವೀಕರಿಸುತ್ತಿದ್ದ  ವಿರಾಜಪೇಟೆ  ಸಿವಿಲ್ ಕೋರ್ಟ್ ನ ಎಸ್ ಡಿ ಎ ಸಿಬ್ಬಂದಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ.

ವಿರಾಜಪೇಟೆ  ಸಿವಿಲ್ ಕೋರ್ಟ್ ನ ಎಸ್ ಡಿ ಎ ಸಿಬ್ಬಂದಿಗಳಾದ

ವಿನಯ್ ಕುಮಾರ್,  ಅಮೀನ್ ರಾದ ಲವಕುಮಾರ್, ಎಂಬವರನ್ನು ವಶಕ್ಕೆ ಪಡೆದು  ತನಿಖೆ ನಡೆಸಲಾಗುತ್ತಿದೆ.

ಕೊಡಗು ಜಿಲ್ಲೆ, ನೆಲ್ಲಿಹುದಿಕೇರಿ ಗ್ರಾಮದ,  ಪತ್ರಿಕಾ ವರದಿಗಾರ ಹಾಗೂ ಛಾಯಚಿತ್ರಗಾರರಾದ ವಿದ್ಯಾದಿ ಅವರು, 2017 ನೇ ಸಾಲಿನಲ್ಲಿ ನೀಡಿದ ವರದಿಯ ಮೇರೆಗೆ ಪತ್ರಿಕೆಯಲ್ಲಿ ಪ್ರಕಟವಾದ ವಿಚಾರವೊಂದರ ಸಂಬಂಧ  ವಿರಾಜಪೇಟೆ ಸಿವಿಲ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ವಿದ್ಯಾದಿ ಎದುರಿಸಿದ್ದರು.

ನ್ಯಾಯಾಲಯವು ಆ ಮೊಕದ್ದಮೆ ಸಂಬಂಧ ತೀರ್ಪು ಪ್ರಕಟಿಸಿ 118,000 ರೂ ಮೊತ್ತವನ್ನು ಪಾವತಿಸುವಂತೆ ಆದೇಶಿಸಿತ್ತು.

ನ್ಯಾಯಾಲಯದ ಸಿಬ್ಬಂದಿ ವಿನಯ್‌ ಕುಮಾರ್‌ ಮತ್ತು ಆಮೀನ್ ರಾದ ಲವ ಎಂಬುವರು  ಜಪ್ತಿ ಮಾಡುವುದಾಗಿ ಹೆದರಿಸಿ 5.000 ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಸಂಬಂಧ  ವಿದ್ಯಾದಿಯವರು ಎಸಿಬಿಗೆ ದೂರು‌ ನೀಡಿದ್ದರು.

ವಿದ್ಯಾದಿ ಅವರಿಂದ ಲಂಚ ಸ್ವೀಕರಿಸುವಾಗಲೇ ವಿನಯ್‌ಕುಮಾರ್, ಲವಕುಮಾರ್ ಅವರನ್ನು ಕೊಡಗು ಜಿಲ್ಲೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಲೆಗೆ ಬೀಳಿಸಿದ್ದಾರೆ.

ಆರೋಪಿಗಳಿಂದ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.