ವಕೀಲೆ ಸಾವು: ಸಹಜ ಸಾವಲ್ಲ, ಕೊಲೆ ಎಂದ ಪೋಷಕರು

ಮೈಸೂರು: ಮೈಸೂರಿನ ರಾಮಕೃಷ್ಣ ನಗರದಲ್ಲಿ  ವಕೀಲೆಯೊಬ್ಬರು ಮೃತಪಟ್ಟಿದ್ದು,ಆಕೆಯ ಪೋಷಕರು ಇದು ಸಹಜ ಸಾವಲ್ಲ,ಕೊಲೆ ಎಂದು ಆರೋಪಿಸಿದ್ದಾರೆ.

ರಾಮಕೃಷ್ಣನಗರದ ನಿವಾಸಿ ಚಂದ್ರಕಲಾ(32)ಎಂಬ ವಕೀಲೆ ಸಾವನ್ನಪ್ಪಿದ್ದಾರೆ.

ಆಕೆ 2019ರಲ್ಲಿ ರಾಮಕೃಷ್ಣ ನಗರ ನಿವಾಸಿ ವಿಚ್ಛೇದಿತ ಪ್ರದೀಪ್ ಎಂಬವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇವರಿಗೆ ಆರು ತಿಂಗಳ ಒಂದು ಮಗು ಕೂಡ ಇದೆ.

ಶನಿವಾರ ಬೆಳಗಿನ ಜಾವ ನಾಲ್ಕು ಮೂವತ್ತರ ಸುಮಾರಿಗೆ ಮೃತ ಚಂದ್ರಕಲಾ ಪತಿ ಆಕೆಯ ಪೊಷಕರಿಗೆ ಕರೆ ಮಾಡಿ ಮನೆಯ ಬಳಿ ಬರುವಂತೆ ತಿಳಿಸಿದ್ದ.

ಬಳಿಕ  ಅವರ ನಿವಾಸಕ್ಕೆ ಸಮೀಪವಿರುವ ಖಾಸಗಿ ಆಸ್ಪತ್ರೆಯ ಬಳಿ ಬರಲು ಹೇಳಿದ್ದ.

ಇದರಿಂದ ಅನುಮಾನಗೊಂಡ ಚಂದ್ರಕಲಾ ಪಷಕರು ಆಕೆಯದು ಸಹಜ ಸಾವಲ್ಲ ಏನೋ ಆಗಿದೆ ಎಂದು ಅನುಮಾನ ಪಟ್ಟಿದ್ದಾರೆ.

ಮಗಳ ಅತ್ತೆ-ಮಾವ, ಮತ್ತು ಪತಿ ಸೇರಿ ಕೊಲೆ ಮಾಡಿದ್ದಾರೆ. ಅವರು ವರದಕ್ಷಿಣೆಗಾಗಿ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಕುವೆಂಪುನಗರ ಠಾಣೆಯ ಇನ್ಸಪೆಕ್ಟರ್ ಚಂದ್ರಕಲಾ ಪತಿ ಮತ್ತು ಮಾವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ, ಆದರೆ ಅತ್ತೆ ಪರಾರಿಯಾಗಿದ್ದಾರೆ.

ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಉಮೇಶ್ ಅವರು ಸಹೋದ್ಯೋಗಿಯ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.