(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಕಾನೂನು ರಕ್ಷಣೆಗೆ ಹೆಸರಾದ ಆರಕ್ಷಕ ವರ್ಗ ಅದರಲ್ಲೂ ಚಾಮರಾಜನಗರದ ಆರಕ್ಷಕರೇ ವೇತನ ಭಾಗ್ಯದಿಂದ ವಂಚಿತರಾಗಿದ್ದಾರೆ ಎಂದರೆ ನಂಬುತ್ತೀರ… ಆದರೆ ಇದು ನಿಜ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಿಂಗಳ ಕೊನೆಯ ದಿನ ಅಥವಾ ಅದರೊಳಗೆ ಸಂಬಳ ಪಾವತಿ ಮಾಡೋದು ವಾಡಿಕೆ.
ಆದರೆ ಚಾಮರಾಜನಗರದಲ್ಲಿ ತಿಂಗಳು ಕಳೆದು ಹದಿನಾಲ್ಕು ದಿನವಾದರೂ ವೇತನ ಭಾಗ್ಯ ಕಾಣದೆ ಪೊಲೀಸರು ಪರಿತಪಿಸುವಂತಾಗಿದೆ.
ಚಾಮರಾಜನಗರದಲ್ಲಿ ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ಇದ್ದು ಆಡಳಿತ ವರ್ಗದ ಕಾರ್ಯ ವೈಖರಿಯಿಂದಲೋ ಅಥವಾ ಇನ್ನೇನೊ ಈ ಸಲ ಸಂಬಳ ಕಾಣದೆ ಕಂಗಾಲಾಗಿದ್ದಾರೆ.
ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆ ಆಡಳಿತ ಕಚೇರಿಯಲ್ಲಿನ ಬಹುತೇಕ ಸಿಬ್ಬಂದಿಗಳ ಪೈಕಿ ಕೆಲವರು ಅನುಕಂಪ ಆಧಾರಿತ ಹುದ್ದೆಯಿಂದ ನಿಯೊಜಿಸಲ್ಪಟ್ಟಿದ್ದಾರೆ.
ಕೆಲಸದ ತರಬೇತಿಗಳು ಹೆಚ್ಚು ಅತ್ಯಗತ್ಯವಿದೆ. ಕೂಡಲೆ ಪೊಲೀಸ್ ಮಹಾನಿರ್ದೆಶಕರಾಗಲಿ, ಜಿಲ್ಲಾ ಎಸ್ಪಿ ಆವರಾಗಲಿ ನುರಿತವರನ್ನ ನಿಯೊಜಿಸಿದರೆ ಸೂಕ್ತವಾಗಿದೆ ಜತೆಗೆ ಬೇಗ ವೇತನ ನೀಡುವಂತಾಗಲಿ ಎಂಬುದೇ ಎಲ್ಲರ ಆಶಯ.