ಬೆಳಂಬೆಳಿಗ್ಗೆ ಅಬಕಾರಿ ಇನ್ಸಪೆಕ್ಟರ್ ಗೆ ಛಳಿ ಬಿಡಿಸಿದ ಎಸಿಬಿ ಅಧಿಕಾರಿಗಳು

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿ ಅಧಿಕಾರಿಗಳಿಗೆ ಛಳಿ ಬಿಡಿಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಅಬ್ಕಾರಿ ಇಲಾಖೆಯ ಇನ್ಸ್ ಪೆಕ್ಟರ್ ಹಾಗೂ ಅವರ ಸ್ನೇಹಿತನ‌ ಮನೆ ಮೇಲೆ ಬುಧವಾರ ಮುಂಜಾನೆ  ದಾಳಿ ನಡೆಸಲಾಗಿದೆ.

ಗುಂಡ್ಲುಪೇಟೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಬ್ಕಾರಿ ಇಲಾಖೆಯ ಇನ್ಸ್ ಪೆಕ್ಟರ್ ಚೆಲುವರಾಜು ಅವರು ಮೈಸೂರಿನಲ್ಲಿ ವಾಸವಿರುತ್ತಿದ್ದರು.

ಈ ಅದಿಕಾರಿ ಹಿಂದೆ ಕೊಳ್ಳೇಗಾಲ, ಚಾಮರಾಜನಗರದಲ್ಲೂ ಕೆಲಸ ನಿರ್ವಹಿಸಿ ಈಗ ಗುಂಡ್ಲುಪೇಟೆಯಲ್ಲಿ ಕೆಲಸ ಮಾಡುತ್ತಿದ್ದರು.

ಈ ಅಧಿಕಾರಿ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಬದನಗುಪ್ಪೆಯಲ್ಲಿರುವ ಮಣಿಕಂಠ ವೈನ್ ಶಾಪ್ ಮಾಲೀಕರ ಮಗ ಪುನೀತ್  ಸಮೀಪವರ್ತಿಯಾಗಿದ್ದ. ಅದಿಕೃತ ದೂರು ಬಂದ ಹಿನ್ನಲೆಯಲ್ಲಿ ಚಾಮರಾಜನಗರ – ಮೈಸೂರು ಎಸಿಬಿ ಅದಿಕಾರಿಗಳು ಮೈಸೂರು, ಚನ್ನಪಟ್ಟಣ, ರಾಮನಗರ, ಚಾಮರಾಜನಗರ ಅಲ್ಲದೆ ಬೆಂಗಳೂರಿನಲ್ಲಿರುವ ಈ ಅಧಿಕಾರಿಯ ತಮ್ಮನ ನಿವಾಸ ಮತ್ತು ಸ್ನೇಹಿತನ ಮನೆ  ಹೀಗೆ ವಿವಿಧೆಡೆ ದಾಳಿ ನಡೆಸಿ ನಡೆಸಿದ್ದಾರೆ.