ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಕಾರಾಗೃಹದಿಂದ ವಿಚಾರಣಾಧೀನ ಕೈದಿಯೊಬ್ಬ ಪರಾರಿಯಾಗಿರುವ ಘಟನೆ ನಡೆದಿದೆ.
ಬೈಲಹೊಂಗಲದ ಕಾರಾಗೃಹದಲ್ಲಿದ್ದ ಕೈದಿ ಖಾದಿರ್ ಸಾಬ್ ರಾಜೇಸಾಬ್ (34) ಜೈಲು ಸಿಬ್ಬಂದಿಯ ಗಮನವನ್ನು ಬೇರಡೆ ಸೆಳೆದು ಪರಾರಿಯಾಗಿದ್ದಾನೆ.
ಕೀ ತೆಗೆದು ಸಬ್‍ಜೈಲಿನ ಮುಖ್ಯ ದ್ವಾರದಿಂದಲೇ ಆರೋಪಿ ಪರಾರಿಯಾಗಿದ್ದು ಜೈಲು ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಪ್ರಶ್ನಿಸುವಂತಾಗಿದೆ.
ಸ್ಥಳಕ್ಕೆ ಹೆಚ್ಚುವರಿ ಎಸ್‍ಪಿ ಮಾನಿಂಗ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈಲಹೊಂಗಲ ಪೊಲೀಸರು ಜೈಲಿಗೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.