ಹಿಂದೆ ನಡೆದ ವಾಸ್ತವವನ್ನು ಜನರ ಮುಂದೆ ಕಾಶ್ಮೀರ ಫೈಲ್ಸ್ ಇಟ್ಟಿದೆ -ಸೋಮಣ್ಣ

ಚಾಮರಾಜನಗರ: ಇತಿಹಾಸದಲ್ಲಿ ನಡೆದ ಘಟನೆ ಮುಂದೆ ಪುನರಾವರ್ತನೆಯಾಗಬಾರದು ಎಂಬ ಉದ್ದೇಶದಿಂದ ಕಾಶ್ಮೀರ ಫೈಲ್ಸ್   ಸಿನಿಮಾ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಹೇಳಿದರು.

ಕೊಳ್ಳೇಗಾಲದಲ್ಲಿ ಈ ಚಿತ್ರದ ಕುರಿತು ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಪ್ರತಿ ಕ್ರಿಯಿಸಿದ ಅವರು,ಎಲ್ಲ ಮುಸ್ಲಿಮರು ಕೆಟ್ಟವರಲ್ಲ, ಹಿಂದೂಗಳೆಲ್ಲರೂ ಒಳ್ಳೆಯವರಲ್ಲ. ಕಾಶ್ಮೀರ ಫೈಲ್ಸ್ ಚಿತ್ರವನ್ನು ಮುಸ್ಲಿಮರೂ ನೋಡ್ತಾರೆ ಎಂದು ಹೇಳಿದರು

ಕಾಶ್ಮೀರಕ್ಕೆ ನಾನು ಹಲವು ಬಾರಿ ಹೋಗಿದ್ದೇನೆ. ಅದು ಹೇಗಿದೆ ಎಂಬುದು ಗೊತ್ತಿದೆ. ಹಿಂದೆ ನಡೆದ ವಾಸ್ತವವನ್ನು ಜನರ ಮುಂದೆ ಸಿನಿಮಾ ಇಟ್ಟಿದೆ. ಮುಂದೆ ಇಂತಹದ್ದು ನಡೆಯಬಾರದು ಎಂಬುದು ಉದ್ದೇಶ. ಇದರಲ್ಲಿ ಯಾರದೇ ಪ್ರಾಯೋಜಕತ್ವ ಇಲ್ಲ ಎಂದು ತಿಳಿಸಿದರು.

ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೊಳಿಸುವ ಸರ್ಕಾರದ ಚಿಂತನೆ ಬಗ್ಗೆ ಕೇಳಿದ ಪ್ರಶ್ನೆಗೆ ನನಗೆ ಈ ವಿಷಯ ಗೊತ್ತಿಲ್ಲ.ಚಾಮರಾಜನಗರದ ಉಸ್ತುವಾರಿ ಕೊಟ್ಟಿದ್ದಾರೆ.ಜಿಲ್ಲೆಯ ಅಭಿವೃದ್ಧಿಗೆ ಮಾತ್ರ ಗಮನ ಹರಿಸುತ್ತಿದ್ದೇನೆ ಎಂದು ಉತ್ತರಿಸಿದರು.

ಪಠ್ಯ ಸಿದ್ಧಪಡಿಸುವುದಕ್ಕಾಗಿ ಸಮಿತಿ ಇದೆ. ಸಾಧಕ ಬಾಧಕಗಳನ್ನು ಚರ್ಚೆ

ಮಾಡಿ ನಿರ್ಧರಿಸುತ್ತದೆ. ದೇಶದ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸಲು ಬೇಕಾದ ಕ್ರಮಗಳನ್ನು ಸಮಿತಿ ಕೈಗೊಳ್ಳಲಿದೆ ಎಂದರು.