ಒಂಟಿ ಮಹಿಳೆಯ ಕೊಂದು ನಿರ್ಜನ ಪ್ರದೇಶದಲ್ಲಿ ಬಿಸಾಡಿದ ಪಾಪಿಗಳು

ಚೇಳೂರು: ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿ ದೇಹವನ್ನು ಮೂಟೆ ಕಟ್ಟಿ  ನಿರ್ಜನ ಪ್ರದೇಶದಲ್ಲಿ ಬಿಸಾಡಿರುವ ಘಟನೆ ಚೇಳೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅನಸೂಯಮ್ಮ (60) ಕೊಲೆಯಾದ ಮಹಿಳೆ.

ಚೇಳೂರು ಗೌಡನಕಟ್ಟೆ ಬಳಿಯ ಒಂಟಿ ಮನೆಯಲ್ಲಿ ಅನುಸೂಯಮ್ಮ ವಾಸಿಸುತ್ತಿದ್ದರು.

ಈಕೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿ ನಂತರ ದೇಹವನ್ನು ಮೂಟೆಕಟ್ಟಿ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ.

ಕೊಳೆತ ವಾಸನೆ ಬರುತ್ತಿದ್ದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅನುಸೂಯಮ್ಮ ಅವರನ್ನು ಸೋಮವಾರ ರಾತ್ರಿ ಕೆಲವರು ಮಾತನಾಡಿಸಿದ್ದಾರೆ,ಆ ನಂತರ ಕೊಲೆ ನಡೆದಿರಬಹುದು ಎಂದು  ಪೊಲೀಸರು ಹೇಳಿದ್ದಾರೆ.

ಚೇಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

ಶಿರಾ ಡಿವೈಎಸ್‍ಪಿ ಕುಮಾರಪ್ಪ, ಗ್ರಾಮಾಂತರ ಸರ್ಕಲ್ ಇನ್‍ಸ್ಪೆಕ್ಟರ್ ರವಿಕುಮಾರ್, ಇನ್‍ಸ್ಪೆಕ್ಟರ್‍ಗಳಾದ ನದಾಫ್, ವಿಜಯಕುಮಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.