ಅನಾರೋಗ್ಯದಿಂದ ತಾಯಿ ಸಾವು; ಮಗ ನೇಣಿಗೆ ಶರಣು

ತುಮಕೂರು: ಅನಾರೋಗ್ಯದಿಂದ ತಾಯಿ ಮೃತಪಟ್ಟಿದ್ದರಿಂದ ಮನನೊಂದು ಮಗ ಕೂಡಾ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಹನುಮಂತರಾಜು (42) ನೇಣಿಗೆ ಶರಣಾಗಿರುವ ಮಗ.

ಇವರು ಭಾಗ್ಯನಗರದಲ್ಲಿ ತಾಯಿ, ಪತ್ನಿ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದರು.

ತರಕಾರಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಹನುಮಂತರಾಜು, ಇತ್ತೀಚೆಗೆ ಕೆಲಸ ಬಿಟ್ಟು ಮದ್ಯದ ಚಟ ಅಂಟಿಸಿ ಕೊಂಡಿದ್ದರು.

ಇತ್ತೀಚೆಗೆ ಇವರ ತಾಯಿ ಕ್ಯಾನ್ಸರ್ ರೋಗದಿಂದ ಸಾವನ್ನಪ್ಪಿದ್ದು, ಆಕೆಯ ನೆನಪಿನಲ್ಲಿ ಕುಡಿದು ವಿಶಾಲ್ ಕಂಫರ್ಟ್ ಮಾಲ್ ಬಳಿಯೇ ಇರುತ್ತಿದ್ದ ಎಂದು ತಿಳಿದು ಬಂದಿದೆ.

ಗುರುವಾರ ರಾತ್ರಿ ವಿಶಾಲ್ ಕಂಫರ್ಟ್ ಮಾಲ್ ಬಳಿಯೇ ಆತ್ಮಹತ್ಯೆಗೆ ಶರಣಾಗಿದ್ದು, ಸ್ಥಳಕ್ಕೆ ಗ್ರಾಮಾಂತರ ಠಾಣೆ ಇನ್‍ಸ್ಪೆಕ್ಟರ್ ಪ್ರಸನ್ನ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.