ಉಪತಹಸೀಲ್ದಾರ್ ತಂದೆ-ತಾಯಿ ಆತ್ಮಹತ್ಯೆ

ತುಮಕೂರು: ಮಧುಗಿರಿಯ ಉಪತಹಸೀಲ್ದಾರ್ ಶಿವರುದ್ರಯ್ಯ ಅವರ ತಂದೆ-ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿರಾ ತಾಲ್ಲೂಕಿನ ಹಾಲೇನಹಳ್ಳಿಯಲ್ಲಿ ಶಿವರುದ್ರಯ್ಯ ಅವರ ತಂದೆ ಶಿವಣ್ಣ (78), ತಾಯಿ ಸಿದ್ಧಲಿಂಗಮ್ಮ (73) ವಾಸವಾಗಿದ್ದರು.

ಬೆಳಿಗ್ಗೆಯಿಂದ ಮನೆಯ ಬಾಗಿಲು ತೆಗೆಯದೆ ಇದ್ದದ್ದು ಕಂಡು ಶುಕ್ರವಾರ ರಾತ್ರಿ ಅಕ್ಕಪಕ್ಕದವರು ಕಿಟಕಿ ತೆಗೆದು ನೋಡಿದ್ದಾರೆ ಆಗ‌ ಅವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.