ಪೊಲೀಸ್ ಧ್ವಜ ದಿನಾಚರಣೆ ಆಚರಣೆ

ವರದಿ:ರಾಮಸಮುದ್ರ ಎಸ್. ವೀರಭದ್ರಸ್ವಾಮಿ

ಚಾಮರಾಜನಗರ: ನಗರದ ಪೊಲೀಸ್ ಇಲಾಖೆ ಕವಾಯತು ಮೈದಾನದಲ್ಲಿ ಶನಿವಾರ  ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸ್ ಧ್ವಜ ದಿನಾಚರಣೆ ನಡೆಯಿತು.

ಅರಣ್ಯಾದಿಕಾರಿ ಸಂತೋಷ್, ಎಸ್ಪಿ ಶಿವಕುಮಾರ್, ಎಎಸ್ಪಿ ಸುಂದರರಾಜು ನಿವೃತ್ತ ಪಿಎಸ್ಐ ನಟರಾಜು ಅವರು ಪೊಲೀಸ್ ದ್ವಜ ಅನಾವರಣ ಮಾಡಿದರು.

ನಂತರ ಮಾತನಾಡಿದ ಎಸ್ಪಿ ಶಿವಕುಮಾರ್ ಇಲಾಖೆಯು ಪ್ರತಿ ವರ್ಷ ದ್ವಜ ದಿನಾಚರಣೆ ಮಾಡಿ ಅದರಿಂದ ಬಂದಂತ ಹಣವನ್ನ ಹುತಾತ್ಮ ಪೊಲೀಸರ ಕುಟುಂಬದವರ ಆರೋಗ್ಯ ಶಿಕ್ಷಣ ಇನ್ನಿತರ ಅನುಕೂಲಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಶಿಸ್ತಿನ ಇಲಾಖೆಯಲ್ಲಿ ಪೊಲೀಸರ ಸೇವೆ ಅಪಾರ. ಅವರ ಸೇವೆ ಅಪಾರ ಎಂದು ಸೇವೆ ಶ್ಲಾಘಿಸಿದರು.

ನಂತರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪಿಎಸ್ಐ ನಟರಾಜು ಅವರು ತಮ್ಮ ಕರ್ತವ್ಯದ ಆ ದಿನಗಳಿಂದ ನಿವೃತ್ತಿ ಅಂಚಿನವರೆಗೂ ಆದ, ಅನುಭವ ಅವರ ಸವಾಲುಗಳನ್ನ ಇದೆ ಸಂದರ್ಭದಲ್ಲಿ ಸ್ಮರಿಸಿಕೊಂಡರು.

ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಿವೃತ್ತಿ ಹೊಂದಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು.