ಹಾಸನ: ಹಾಸನ ಜಿಲ್ಲೆಯಲ್ಲಿ ಮುಸ್ಲಿಮರ ಆಜಾನ್ ವಿರುದ್ಧ ಮಂತ್ರ ಪಠಣೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಹಾಸನದ ಅರಸೀಕೆರೆಯ ಕಾಳಿಕಾಂಬ ದೇಗುಲದಲ್ಲಿ ಕಾಳಿ ಮಂತ್ರವನ್ನು ಕಾಳಿ ಸ್ವಾಮೀ ಪಠಿಸಿದ್ದಾರೆ.
ಅಧಿಕೃತ ಮಸೀದಿಗಳಲ್ಲಿ ಮಾತ್ರ ಆಜಾನ್ ಕೂಗಲು ಅನುಮತಿ ಇದೆ. ಆದರೆ ಎಲ್ಲಾ ಮಸೀದಿಗಳಲ್ಲೂ ಆಜಾನ್ ಕೂಗಲಾಗುತ್ತಿದೆ.
ಅಷ್ಟೇ ಅಲ್ಲದೇ ಆಜಾನ್ ಕೂಗಲು ಸ್ಪಷ್ಟವಾದ ಕೋರ್ಟ್ ನಿಯಮವಿದೆ. ಆದರೆ ಈ ನಿಯಮವನ್ನು ಉಲ್ಲಂಘಿಸಿ ಆಜಾನ್ ಕೂಗಲಾಗುತ್ತಿದೆ. ಈ ರೀತಿ ಆಜಾನ್ ಕೂಗುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದೇ ಇದ್ದರೆ ಹಿಂದೂ ದೇವಾಲಯಗಳಲ್ಲೂ ಭಜನೆ, ಮಂತ್ರವನ್ನು ಪಠಿಸಲಾಗುವುದು ಎಂದು ಹಿಂದೂ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದರು.
ಈ ಎಚ್ಚರಿಕೆ ಬೆನ್ನಲ್ಲೇ ಮಂಗಳವಾರ ಮುಂಜಾನೆ 5.30ಕ್ಕೆ ಧ್ವನಿವರ್ಧಕದ ಮೂಲಕ ಕಾಳಿ ಸ್ವಾಮೀ ಮಂತ್ರಪಠಣ ಮಾಡಿ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಅಭಿಯಾನ ಮತ್ಯಾವ ತಿರುವು ಪಡೆಯಲಿದೆಯೋ ಕಾದು ನೋಡಬೇಕಿದೆ.