ಹೈದ್ರಾಬಾದ್ : ತಾನೇ ತೋಡಿದ ಕೆಡ್ಡಕ್ಕೆ ತಾನೇ ಬಿದ್ದನಂತೆ ಎಂಬ ಮಾತಿದೆ.ಅದೇ ರೀತಿ ಆಂಧ್ರಪ್ರದೇಶದಲ್ಲಿ ಕಳ್ಳನೊಬ್ಬ ಸಿಕ್ಕಿಬಿದ್ದಿದಗದಾನೆ.
ದೇವಸ್ಥಾನದ ಚಿನ್ನಾಭರಣ ಕದಿಯಲು ಕಳ್ಳ ಗೋಡೆಯಲ್ಲಿದ್ದ ಚಿಕ್ಕ ಕೊಟಕಿ ಕೊರೆದ.ಆದರೆ ಅದೇ ಕಿಂಡಿಯಲ್ಲಿ ಸಿಲುಕಿಕೊಂಡು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶದ ಶ್ರೀಕಾಕುಳಂನ ಕರಾವಳಿ ಜಿಲ್ಲೆಯ ಜಾಮಿ ಯಲಮ್ಮ ದೇವಸ್ಥಾನದ ಆಭರಣಗಳನ್ನು ಕದಿಯಲು ಆರೋಪಿ ಬಂದಿದ್ದ.
ಆರೋಪಿಯನ್ನು 30 ವರ್ಷದ ಪಾಪರಾವ್ ಎಂದು ಗುರುತಿಸಲಾಗಿದೆ.
ಈತ ದೇವಸ್ಥಾನದ ಚಿಕ್ಕ ಕಿಟಕಿ ಮುರಿದು ಸ್ವಲ್ಪ ಗೋಡೆ ಕೊರೆದು ದೇವರ ವಿಗ್ರಹಗಳಲ್ಲಿದ್ದ ಆಭರಣಗಳನ್ನು ದೋಚಿದ್ದ.
ನಂತರ ಅಲ್ಲಿಂದ ಪರಾರಿಯಾಗುವ ವೇಳೆ ಗೋಡೆಯಲ್ಲೇ ಸಿಲುಕಿಕೊಂಡಿದ್ದಾನೆ.
ಹೊರ ಬರಲು ಆಗದೇ ಪಾಪ ರಾವ್ ಸಹಾಯಕ್ಕಾಗಿ ಅಳಲು ಪ್ರಾರಂಭಿಸಿದ್ದಾನೆ. ನಂತರ ಗ್ರಾಮಸ್ಥರು ಆತನನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿದ್ದಾರೆ.