ಬೆಂಕಿ ಹಚ್ಚಿ ಮಗನ ಕೊಂದ ಅಪ್ಪ

ಬೆಂಗಳೂರು: ಹಣ ಕಳೆದುಕೊಂಡದ್ದಕ್ಕೆ ತಂದೆ ಯೇ ಮಗನನ್ನು ಬಿಂಕಿ‌ಹಚ್ಚಿ ಕೊಂದಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಾಡೆದಿದೆ.

ಬೆಂಗಳೂರಿನ ಆಜಾದ್ ನಗರದಲ್ಲಿ ಗುರುವಾರ ಮಟಮಟ ಮಧ್ಯಾಹ್ನ ಈ ಹೇಯ ಘಟನೆ ನಡೆದಿದೆ.

ಆಜಾದ್ ನಗರದ ಅರ್ಪಿತ್ 12 ಸಾವಿರ ರೂ ಕಳೆದುಕೊಂಡಿದ್ದ.ಜತೆಗೆ ಆತ ಯಾವುದೇ ಕೆಲಸ ಮಾಡುತ್ತಿರಲಿಲ್ಲ ಇದರಿಂದ ತಂದೆ ಸುರೇಂದ್ರ ಬೇಸರಗೊಂಡಿದ್ದರು.

12 ಸಾವಿರ ಕಳೆದುಕೊಂಡಿದ್ದರ ಬಗ್ಗೆ ತಂದೆ ಕೇಳಿದಾಗ ಮಗ ಬೇಜವಾಬ್ದಾರಿ ಉತ್ತರ ಕೊಟ್ಟಿದ್ದಾನೆ ಇದರಿಂದ ಕೋಪಗೊಂಡ ಸುರೇಂದ್ರ ಮಗನ ಮೇಲೆ ಪೆಟ್ರೋಲ್ ಸುರಿದಿದ್ದಾನೆ.

ತಕ್ಷಣ ಮಗ ಅರ್ಪಿತ್ ಹೊರಗಡೆ ಓಡಿ ಬಂದು ಸಮಜಾಯಿಷಿ ಕೊಡಲು ಮುಂದಾಗಿದ್ದಾನೆ ಆದರೆ ಅಪ್ಪ ಕೂಡಲೇ ಬೆಂಕಿ ಪೊಟ್ಟಣ ಗೀರಿ ಮಗನ ಮೇಲೆ ಎಸೆದುಬಿಡುತ್ತಾನೆ.

ಇದರಿಂದ ಧಗ್ಗನೆ ಬೆಂಕಿ ಹೊತ್ತಿಕೊಂಡಿದೆ ತೀವ್ರ ಸುಟ್ಟ ಗಾಯಗಳಿಂದಾಗಿ ಮಗ ಮೃತಪಟ್ಟಿದ್ದಾನೆ.

ಮಗ ಸಾಕಷ್ಟು ಹಣ ಕಳೆದಿದ್ದಾನೆ ಎಷ್ಟು ಬುದ್ದಿ ಹೇಳಿದರೂ ಬದಲಾಗಿಲ್ಲ ಈಗ ಮತ್ತೆ ಹಣ ಕಳೆದಿದ್ದಾನೆ ಇದರಿಂದ ಕೊಪಗೊಂಡು ಆತನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಗಿ ಸುರೇಂದ್ರ ಒಪ್ಪಿಕೊಂಡಿದ್ದಾನೆ.

ಇದೀಗ ಪೊಲೀಸರು ಸುರೇಂದ್ರನನ್ನು ಬಂಧಿಸಲಾಗಿದೆ.