ಬೆಂಗಳೂರಿನಲ್ಲಿ ಪೊಲೀಸರ ಭರ್ಜರಿ ಬೇಟೆ: 37 ಕೋಟಿ ಬೆಲೆಯ ಮಾದಕ ವಸ್ತು ವಶ

ಬೆಂಗಳೂರು:‌ ಬೆಂಗಳೂರಿನಲ್ಲಿ ಪೊಲೀಸರು ಮಾದಕ ವಸ್ತು ಸರಬರಾಜು ಮಾಡುವವರ‌ ಹೆಡೆಮುರಿ ಕಟ್ಟುತ್ತಲೇ ಇದ್ದರೂ ಮತ್ತೆ,ಮತ್ತೆ ಕೋಟ್ಯಾಂತರ ಬೆಲೆಯ ಮಾದಕ‌ ಪತ್ತೆ‌ ಆಗುತ್ತಲೇ ಇದೆ.

ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಮೂರು ಮಂದಿ ಅಂತಾರಾಜ್ಯ ಆರೋಪಿಗಳನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿ‌ 37 ಕೋಟಿ ಬೆಲೆಯ ಮದಕ ವಶಪಡಿಸಿಕೊಂಡಿದ್ದಾರೆ.

ಎಚ್‍ಬಿಆರ್ ಲೇಔಟ್, 5ನೇ ಹಂತ, 1ನೇ ಬ್ಲಾಕ್, ಫಾರೆಸ್ಟ್ ಕಚೇರಿ ಹಿಂಭಾಗದಲ್ಲಿರುವ ವಾಟರ್‍ಟ್ಯಾಂಕ್ ಬಳಿ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದ ತಕ್ಷಣ ಪೊಲೀಸ್  ಅಧಿಕಾರಿ ಮತ್ತು ಸಿಬ್ಬಂದಿ  ದಾಳಿ ಮಾಡಿ ಮೂವರನ್ನು  ಬಂಧಿಸಿದ್ದಾರೆ.

ಸೆಲೆಬ್ರಿಟಿಗಳು, ವಿದ್ಯಾರ್ಥಿಗಳು, ಉದ್ಯಮಿಗಳು ಹಾಗೂ  ಗಿರಾಕಿಗಳಿಗೆ ಮಾದಕವಸ್ತು ಮಾರಾಟ ಮಾಡುತ್ತಿದ್ದರು.

ಆರೋಪಿಗಳಿಂದ 35 ಕೋಟಿ ಮೌಲ್ಯದ ಮೆಥ್ಯಾಕ್ವಾಲೊನ್, 1.18 ಕೋಟಿ ಮೌಲ್ಯದ 6.5 ಕೆಜಿ ತೂಕದ ಎಂಡಿಎಂಎ, 15 ಲಕ್ಷ ಮೌಲ್ಯದ 300 ಟ್ರೊಮೊಡೋಲ್, 7.5 ಲಕ್ಷ ಮೌಲ್ಯದ 75 ಗ್ರಾಂ ಕೊಕೈನ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಭೀಮಾಶಂಕರ್ ಎಸ್.ಗುಳೇದ ಅವರ ಮಾರ್ಗದರ್ಶನದಲ್ಲಿ ಕೆಜಿಹಳ್ಳಿ ಉಪವಿಭಾಗದ ಎಸಿಪಿ ಜಗದೀಶ್ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಪ್ರಕಾಶ್ ಅವರನ್ನೊಳಗೊಂಡ ತಂಡ  ಕಾರ್ಯಾಚರಣೆ

ನಡೆಸಿದರು.