(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಸೋಮವಾರ ರಾತ್ರಿ ರಸ್ತೆ ಅಪಘಾತ ಸಂಭವಿಸಿ ಬೈಕ್ ನಲ್ಲಿ ಪಯಣಿಸುತ್ತಿದ್ದ ಪೊಲೀಸ್ ಕಾನ್ಸ್ ಟೆಬಲ್ ಸಾವನ್ನಪ್ಪಿದ್ದು ಎ ಎಸ್ ಐ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಸಂತೆಮರಳ್ಳಿ ಠಾಣೆಯ ಪ್ರಸಾದ್ ಎಂಬ ಪೇದೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಎಎಸ್ಐ ರಾಜು ಅವರಿಗೆ ತೀವ್ರ ಪೆಟ್ಟಾಗಿದ್ದು ಮೈಸೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ರಾತ್ರಿ ಸಂತೆಮರಳ್ಳಿ ಠಾಣೆಯಿಂದ ಬೈಕ್ ನಲ್ಲಿ ಹೊರಟ ಇಬ್ಬರು ಕೆಂಪನಪುರ ಗೇಟ್ ಬಳಿ ಬರುತ್ತಿದ್ದಾಗ ಹಿಂಬದಿಯಿಂದ ಬಂದ ಸ್ಯಾಂಟ್ರೊ ಕಾರು ಡಿಕ್ಕಿ ಹೊಡೆದಿದೆ.
ಈ ಸಂಬಂದ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಉಪಯೋಗಕ್ಕೆ ಬಾರದ ಜಿಲ್ಲಾಸ್ಪತ್ರೆ: ಗಾಯಗೊಂಡಿದ್ದ ಎ ಎಸ್ ಐ ಅವರನ್ನು ಜಿಲ್ಲಾಸ್ಪತ್ರೆಗೆ ಕರೆತಂದರೂ ಯಾವುದೆ ಪ್ರಯೋಜನವಾಗದೇ ಮೈಸೂರಿನ ಖಾಸಗೀ ಆಸ್ಪತ್ರೆಗೆ ರವಾನಿಸಲಾಯಿತು.ಜಿಲ್ಲಾಸ್ಪತ್ರೆ ಇದ್ದೂ ಇಲ್ಲದಂತಾಗಿದೆ.
ಯಡಬೆಟ್ಟ ಸಮೀಪ ನೂತನ ಜಿಲ್ಲಾಸ್ಪತ್ರೆಗೆ ವರ್ಗ ಆದ ಮೇಲಂತು ಸಾರ್ವಜನಿಕರ ಪಾಡು ನಾಯಿ ಪಾಡಿಗಿಂತ ಕಡೆಯಾಗಿದೆ.
ಸ್ವತಂ ಡಿವೈಸ್ಪಿ ಅವರೆ ಮುಂದೆ ನಿಂತು ಎ ಎಸ್ ಐ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.