ಅಧ್ಯಕ್ಷ ಸ್ಥಾನ ನಿಭಾಯಿಸುವಲ್ಲಿ ಸಂಪೂರ್ಣ ಜಾವಾಬ್ದಾರಿ ಸಿಗಲಿಲ್ಲ -ಎಚ್.ಕೆ.ಕೆ

ಹಾಸನ: ಪಕ್ಷ ನನಗೆ ಒಳ್ಳೆಯ ಹುದ್ದೆ ಕೊಟ್ಟಿತ್ತು. ಅದರೆ ಕಾರ್ಯಕರ್ತರ ಬಳಿಗೆ ಹೋಗಿ ಕೆಲಸ ಮಾಡಲು ಆಗಲಿಲ್ಲ ಎಂದು  ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ದುಃಖ ದಿಂದ ನುಡಿದರು.

ಹಾಸನದಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು ಈ ಎರಡು ವರ್ಷಗಳಲ್ಲಿ ನನಗೆ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಲು ಆಗಲಿಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ ಎಂದು ಹೇಳಿದರು.

ಎಚ್.ಡಿ. ಕುಮಾರಸ್ವಾಮಿ ಅವರ ಸೂಚನೆಯಂತೆ ನಾನು ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟು ಕೊಡಲಿದ್ದೇನೆ ಎಂದು ತಿಳಿಸಿದರು.

ಅಧ್ಯಕ್ಷ ಸ್ಥಾನ ನಿಭಾಯಿಸುವುದರಲ್ಲಿ ನನಗೆ ಸಂಪೂರ್ಣ ಜಾವಾಬ್ದಾರಿ ಸಿಗಲಿಲ್ಲ. ಆರು ಭಾರಿ ಶಾಸಕನಾಗಿದ್ದೆ  ಒಂದು ದಿನವೂ  ಅಧಿಕಾರಕ್ಕಾಗಿ ಹಂಬಲಿಸಲಿಲ್ಲ.

ಅನೇಕ ಕಾರಣಕ್ಕಾಗಿ ನನಗೆ ಮಂತ್ರಿ ಸ್ಥಾನ ಕೊಡಲಿಲ್ಲ, ಮಲೆನಾಡಿನ ಭಾಗಕ್ಕೆ ಒಂದು ಮಂತ್ರಿಸ್ಥಾನ ಬೇಕಿತ್ತು. ಆ ಭಾಗಕ್ಕೆ ಮಂತ್ರಿಸ್ಥಾನ ಕೊಟ್ಟಿದ್ದರೆ ಒಂದಿಷ್ಟು ಕೆಲಸ ಆಗುತ್ತಿತ್ತು ಎಂದು ಬೇಸರದಲ್ಲೇ ಹೇಳಿದರು.

ಪಕ್ಷಕ್ಕೆ ಒಳ್ಳೆಯದಾದರೆ, ನನ್ನ ಬೆಂಬಲ ಖಂಡಿತಾ ಇದೆ . ಇಲ್ಲಿಯವರೆಗೂ ಪಕ್ಷ ಹೇಳಿದಂತೆ ಕೇಳಿದ್ದೇನೆ. ಹೆಚ್.ಡಿ. ಕುಮಾರಸ್ವಾಮಿ ಅವರ ಅಣತಿಯಂತೆ ನಾನು ಚರ್ಚೆ ಮಾಡಿ ಈ ನಿರ್ಧಾರಕ್ಕೆ ಬಂದೆ ಎಂದರು.

ನನಗೆ ಯಾವ ಪಕ್ಷದಿಂದಲೂ ಆಫರ್ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಎಚ್.ಕೆ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.