ಡಿ.ಕೆ.ಶಿಯನ್ನ ಮೊದಲು ಜೈಲಿಗೆ ಕಳುಹಿಸಿ -ಯತ್ನಾಳ್

ವಿಜಯಪುರ : ಈಶ್ವರಪ್ಪನವರನ್ನು ಜೈಲಿಗೆ ಹಾಕೋದಲ್ಲ ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳಿಸಿ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.

ಡಿ.ಕೆ.ಶಿವಕುಮಾರ್ ಅವರಿಗೆ ಪೊಲೀಸರು ಹಾಕಿದ ಬ್ಯಾರಿಕೇಡ್ ಹಾರುವಷ್ಟು ಶಕ್ತಿ ಇದೆ.ಅದೇ ದೆಹಲಿಯಲ್ಲಿ ಅವರನ್ನ ಜೈಲಿಗೆ ಹಾಕಿದಾಗ ಬಿಪಿ, ಶುಗರ್ ಹೆಚ್ಚಾಗಿದೆ ಎಂದು ನಾಟಕವಾಡಿದ್ದರು ಎಂದು  ಕಾಲೆಳೆದರು.

ಅವರು ಆರೋಗ್ಯಕರವಾಗಿಯೇ ಇದ್ದಾರೆ. ಆರೋಗ್ಯ ಸಮಸ್ಯೆ ಹೇಳಿ ಜೈಲಿನಿಂದ ಹೊರಗೆ ಬಂದಿದಗದಾರೆ. ಇದನ್ನು ಕೋರ್ಟ್ ಪರಿಗಣಿಸಿ ಮತ್ತೆ ಜೈಲಿಗೆ ಡಿ.ಕೆ. ಶಿವಕುಮಾರ್ ಅವರನ್ನು ಕಳಿಸಬೇಕು ಎಂದು ಯತ್ನಾಳ್ ಆಗ್ರಹಿಸಿದರು.