ಸಮಯ ಪ್ರಜ್ಞೆ ಮರೆತ ಸಂಸದ..!

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಇತ್ತೀಚಿಗೆ ಜನಪ್ರತಿನಿಧಿಗಳಲ್ಲಿ ಸಮಯ ಪ್ರಜ್ಞೆ ಇಲ್ಲವೇನೊ ಅನಿಸುತ್ತಿದೆ.ಇದಕ್ಕೆ ಸ್ಪಷ್ಟ ಉದಾಹರಣೆ ಇಲ್ಲಿದೆ.

ನಗರದಲ್ಲಿ ಆರೋಗ್ಯ ಮೇಳ ಆಯೋಜಿಸಲಾಗಿದ್ದು ಲೋಕಸಭಾ ಸದಸ್ಯರಿಂದ ೧೦ ಗಂಟೆಗೆ ಚಾಲನೆ ದೊರೆಯಬೇಕಿತ್ತು.ಆದರೆ ಎರಡೂವರೆ ಗಂಟೆಗಳ ಕಾಲ ತಡವಾಯಿತು.

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಏಪ್ರಿಲ್ 18ರಿಂದ 22ರವರೆಗೆ ಜಿಲ್ಲೆಯಲ್ಲಿ  ತಾಲೂಕುಮಟ್ಟದ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿದೆ.

ಸೋಮವಾರ ಬೆಳಿಗ್ಗೆ 10 ಗಂಟೆಗೆ ನಗರದ ಪೇಟೆ ಪ್ರೈಮರಿ ಶಾಲಾ ಅವರಣದಲ್ಲಿ    ಜಿಲ್ಲಾಡಳಿತ, ಜಿ ಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆರೋಗ್ಯ ಮೇಳ ಕಾರ್ಯಕ್ರಮಕ್ಕೆ ಚಾಲನೆ ದೊರೆಯಬೇಕಿತ್ತು.

ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಚಾಲನೆ ನೀಡಬೇಕಿತ್ತು..ಅವರು ಎರಡೂವರೆ ಗಂಟೆ ತಡವಾಗಿ ಬಂದ ಕಾರಣ ಅದಿಕಾರಿಗಳು ಬಿಸಿಲಿನಲ್ಲಿ ಬಸವಳಿದು ಕಾದು ಬಸವಳಿಯಬೇಕಾಯಿತು.

ಕಾರ್ಯಕ್ರಮ ವೇದಿಕೆಗಷ್ಟೆ ಸೀಮಿತವಾದಂತಿತ್ತು.

ಪೆಂಡಲ್ ಎದುರು ಮಾದ್ಯಮದವರು, ಛಾಯಗ್ರಾಹಕರು ಬಿಸಿಲಿನಲ್ಲಿ ನಿಂತು ಕೆಲಸ ನಿರ್ವಹಿಸಿಕೊಂಡು ಹೋದರು.

ಒಟ್ಟಿನಲ್ಲಿ ಆರೋಗ್ಯ ಮೇಳ ಅದಿಕಾರಿಗಳಿಗೆ ಮೇಳವಾಯ್ತೇ ಹೊರತು,   ಕಾಟಾಚಾರದ ಕಾರ್ಯಕ್ರಮ ಎಂದರೆ ತಪ್ಪಾಗಲಾರದು.