ಕಾಂಗ್ರೆಸ್ ಪಕ್ಷನ ವಿಸರ್ಜಿಸೋದು ಒಳ್ಳೆಯದು -ರೇವಣ್ಣ ವಾಗ್ದಾಳಿ

ಹಾಸನ: ರಾಜ್ಯದಲ್ಲಿ  ಕಾಂಗ್ರೆಸ್ ಅಡ್ಜೆಸೆಟ್ಮೆಂಟ್ ರಾಜಕೀಯ ಮಾಡುತ್ತಿದ್ದು ಕೂಡಲೇ ಆ ಪಕ್ಷವನ್ನು ವಿಸರ್ಜಿಸೋದು ಒಳ್ಳೆಯದು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.

ಹಾಸನದಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸತ್ತುಹೋಗಿದೆ ಎಂದು ಟೀಕಿಸಿದರು.

ಜೆಡಿಎಸ್ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮುನಿಯಪ್ಪ ಸೋಲಿಗೆ ಅವರದೇ ಪಕ್ಷದವರು ಕಾರಣರಾದರು ಎಂದು ‌ರೇವಣ್ಣ ತಿಳಿಸಿದರು.

ಕಾಂಗ್ರೆಸ್‍ಗೆ ಗೌರವ ಉಳಿದಿದ್ದರೆ‌ ದಲಿತ ಮುಖಂಡ 7 ಬಾರಿ ಲೋಕಸಭೆಗೆ ಗೆದ್ದ ಮುನಿಯಪ್ಪ ಅವರನ್ನು ಹೇಗೆ ನೆಡೆಸಿಕೊಂಡಿದೆ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.

120 ಸಿಟ್ ಪಡೆದಿದ್ದ ಕಾಂಗ್ರೆಸ್ 80 ಕ್ಕೆ ಇಳಿಯಿತು, ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಿದರು. ಹೊಂದಾಣಿಕೆಗಾಗಿಯೇ ಕಾಯುವ ಕಾಂಗ್ರೆಸ್ ಪಕ್ಷದವರಿಗೆ ಜೆಡಿಎಸ್ ಬಗ್ಗೆ ಮಾತನಾಡೊ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಚರಣ್ ಸಿಂಗ್, ಚಂದ್ರಶೇಖರ್, ಹೆಚ್.ಡಿ. ದೇವೇಗೌಡರನ್ನು ಅಧಿಕಾರದಿಂದ ಕೆಳೆಗಿಳಿಯಲು ಕೇಂದ್ರದ ಕಾಂಗ್ರೆಸ್ ಮುಖಂಡರು ಕಾರಣರಾದರು.

ಕಳೆದ ಬಾರಿಯ ಚುನಾವಣೆಯಲ್ಲಿ ನಮ್ಮನ್ನು ಮುಗಿಸಲು ಹೋಗಿ ಬಿಜೆಪಿಗೆ ನೆರವಾಗಿವ  ಮೂಲಕ 25 ಹೆಚ್ಚುವರಿ ಸೀಟ್ ಗೆಲ್ಲಲು ಕಾರಣರಾದರು ಎಂದು ರೇವಣ್ಣ ಆರೋಪಿಸಿದರು.

ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಭ್ರಷ್ಟಾಚಾರ ಬಗ್ಗೆ ಮಾತನಾಡೋ ಯಾವುದೇ ನೈತಿಕತೆ ಇಲ್ಲ ಎಂದರು.