ಹಾಸನ: ಹುಬ್ಬಳ್ಳಿಯಲ್ಲಿ ಸಿದ್ಧರಾಮಯ್ಯ ಪಕ್ಷದವರೇ ಡಿ.ಜಿ. ಹಳ್ಳಿ ರೀತಿಯಲ್ಲಿ ಬೆಂಕಿ ಹಚ್ಚಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಕೇಳಿರುವ ನಾಲ್ಕು ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ಕೊಡಲಿ ಪುನರುಚ್ಚರಿಸಿದರು.
ಕಾಂಗ್ರೆಸ್ ಅನ್ನು ಇಡೀ ದೇಶದಲ್ಲಿ ತಿರಸ್ಕಾರ ಮಾಡಲಾಗಿದೆ. ಕರ್ನಾಟಕ ಒಂದರಲ್ಲಿ ಜೀವ ಉಳಿದಿದೆ ಎಂದು ಟೀಕಿಸಿದರು.
2009ರಲ್ಲಿ ಆಪರೇಷನ್ ಕಮಲದ ಹಿನ್ನೆಲೆಯಲ್ಲಿ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಣಿಯಲು ಬಿಜೆಪಿ ಅಭ್ಯರ್ಥಿಯಿಂದ ಎಷ್ಟು ಹಣವನ್ನು ಸುಳ್ಳಿನ ರಾಮಯ್ಯ ಸಂದಾಯ ಮಾಡಿಸಿಕೊಂಡರು ಎಂದು ಎಚ್ ಡಿ ಕೆ ಪ್ರಶ್ನಿಸಿದರು.
ಪದೇ ಪದೇ ಬಿಜೆಪಿಯ ಬಿಟೀಂ ಎಂದು ನಮಗೆ ಹೇಳುತ್ತಿದ್ದೀರಿ. ಯಾರಿಂದ ಈ ಸರ್ಕಾರ ನಡೆಯುತ್ತಿರುವುದು, ಸಿದ್ಧವನದಲ್ಲಿ ಕುಳಿತುಕೊಂಡು ನಡೆಸಿದರಲ್ಲಾ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಮೂಲ ಕಾರಣ ನೀವೆ ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.