ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಪ್ರೇಮಿಗಳಿಬ್ಬರು ಹಾಡಹಗಲೇ ರಸ್ತೆಯಲ್ಲಿ ಅದು ಬೈಕ್ ಮೇಲೆ ಕುಳಿತು ಲವ್ವಿ-ಡವ್ವಿ ಆಟ ಆಡಿರುವ ಘಟನೆ ಚಾಮರಾಜನಗರ- ಗುಂಡ್ಲುಪೇಟೆ ರಸ್ತೆಯಲ್ಲಿ ನಡೆದಿದ್ದು ಜನರು ಅವಕ್ಕಾಗಿದ್ದಾರೆ.
ಪಲ್ಸರ್ ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಉಲ್ಟಾ ಕುಳಿತ ಯುವತಿ ಹುಡುಗನನ್ನು ಅಪ್ಪಿಕೊಂಡು ಮುತ್ತು ಕೊಡುತ್ತಾ ಹೋಗಲಿದ್ದು ಜನರು, ಬಸ್ಸು, ಲಾರಿಗಳ ಸಂಚಾರದ ಪರಿವೇ ಇಲ್ಲದೇ ಹೆದ್ದಾರಿಯಲ್ಲಿ ಹುಚ್ಚಾಟ ನಡೆಸಿದ್ದಾರೆ.
ಬೈಕ್ ಚಾಮರಾಜನಗರದ್ದಲ್ಲೇ ನೋಂದಣಿಯಾಗಿದ್ದು ಕೆಲ ಸವಾರರು ಇಬರಿಬ್ಬರ ಆಟವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರಾಗಲಿ ದಾಖಲಾಗಿಲ್ಲ.