ಈಗಿನ ಶಾಸಕರು ಗೆದ್ದ ಬೆಳಿಗ್ಗೇನೆ ಮಂತ್ರಿ ಆಗಬೇಕು ಅಂತಾರೆ -ಎಚ್ ಡಿ ಡಿ

ಹಾಸನ: ಜಲಧಾರೆ ಹೊರಾಟ ನನ್ನ ಮಕ್ಕಳು ಮೊಮ್ಮಕ್ಕಳನ್ನು ಮುಖ್ಯಮಂತ್ರಿ ಮಾಡಲು ಜಲಧಾರೆ ಹೋರಾಟ ಮಾಡುತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದರು.

ಹಾಸನದಲ್ಲಿ ಜನತಾ ಜಲಧಾರೆ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ನಾನು ಮೊದಲ ಬಾರಿ ಮಂತ್ರಿಯಾಗಲು 22 ವರ್ಷ ಬೇಕಾಯಿತು,ಈಗಿನ ಶಾಸಕರು ಗೆದ್ದ ಬೆಳಿಗ್ಗೇನೆ ಮಂತ್ರಿಯಾಗಬೇಕು ಅಂದು ಕೊಂಡಿದ್ದಾರೆ ಎಂದ ಜಲಧಾರೆ ಕಾರ್ಯಕ್ರಮಕ್ಕೆ ಗೈರಾಗಿದ್ದ ಜೆಡಿಎಸ್ ಶಾಸಕರಿಗೆ ಹೇಳಿದರು.

1962 ರಲ್ಲಿ ಮೊದಲ ಬಾರಿಗೆ ರೈತನ ಮಗನಾಗಿ ಬಂಡಾಯ ಕಾಂಗ್ರೆಸ್ ನಿಂದ ಗೆದ್ದು ಶಾಸಕನಾದೆ. ನಾನು ರಾಜ್ಯದ ಸಮಸ್ಯೆಗಳನ್ನು ಅಧ್ಯಯನ ಮಾಡಿ ವಿಧಾನಸಭೆಯಲ್ಲಿ ಗಂಟೆ ಗಟ್ಟಲೇ ಮಾತನಾಡುತ್ತಿದ್ದೆ ಎಂದು ಹೇಳಿದರು.

ನಮ್ಮಲ್ಲಿ ಒಗ್ಗಟ್ಟಿಲ್ಲದ ಕಾರಣ ನಮ್ಮನ್ನು ಯಾರು ಕೇಳುವುದಿಲ್ಲ. ತಮಿಳುನಾಡಿನಲ್ಲಿ 40 ಜನ ಸಂಸದರು ಒಂದೇ ಪಕ್ಷದಿಂದ ಜಯಗಳಿಸಿ ಪ್ರಧಾನಿ ಯಾರಾಗುತ್ತಾರೆ ಎಂದು ನಿರ್ಣಾಯಕ ಪಾತ್ರ ವಹಿಸುತ್ತಾರೆ. ತಮಿಳರ ಹೊಡೆತ ಕರ್ನಾಟಕದ ಸಂಸದರು ತಡೆಯಲು ಆಗೊಲ್ಲ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ‌ಮಾತನಾಡಿ, ಬಿಜೆಪಿ ಹಾಗೂ ಕಾಂಗ್ರೆಸ್ ಏನೇ ದೊಂಬರಾಟ ನಡೆಸಿದರು ರಾಜ್ಯದಲ್ಲಿ ಜೆಡಿಎಸ್ ಅಧಿಕಾರ ಹಿಡಿಯುತ್ತದೆ ಎಂದು ಹೇಳಿದರು.

ದೇಶದಲ್ಲಿ ಪೆಟ್ರೋಲ್ .ಬೆಲೆ 110 ಆಗಿದೆ.ಅಕ್ಕಿ .ಎಣ್ಣಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಜಾಸ್ತಿಯಾಗಿದೆ .ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಸ್ವತ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ತೆಗೆದಿದ್ದು ಸಿದ್ದರಾಮಯ್ಯ, ಆದರೆ ಇದೇ ಸಿದ್ದರಾಮಯ್ಯ ಇಳಿ ವಯಸ್ಸಿನ ದೇವೇಗೌಡರನ್ನು ಬೈಯುತ್ತಾರೆ. ಹಾಸನ ಜಿಲ್ಲಾಯ ಪ್ರಚಾರದ ಸಮಯದಲ್ಲಿ ಜೆಡಿಎಸ್ ಬಿ ಟೀಂ ಎಂದು ಸಿದ್ದರಾಮಯ್ಯ ಕರೆದಿದ್ದರಿಂದಲೇ ಹಾಸನ ವಿಧಾನಸಭೆ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯವರು ಕಾಂಗ್ರೆಸ್‍ಗೆ ಮತ ನೀಡಿ ಬಿಜೆಪಿ ಗೆಲುವಿಗೆ ಕಾರಣರಾದರು ಎಂದು ಇಬ್ರಾಹಿಂ ಟೀಕಿಸಿದರು.