ಹಿಂದೂಗಳನ್ನು ಭೀತಿಗೊಳಿಸುವುದಕ್ಕಾಗಿ ಹುಬ್ಬಳ್ಳಿಯಲ್ಲಿ ಗಲಭೆ; ಮುತಾಲಿಕ್ ಆರೋಪ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಘಟನೆ  ಪೂರ್ವ ನಿಯೋಜಿತ ಕೃತ್ಯವಾಗಿದ್ದು,  ಹಿಂದೂಗಳನ್ನು ಭಯಭೀತಿಗೊಳಿಸುವ ಉದ್ದೇಶದಿಂದಲೇ ಗಲಭೆ ರೂಪಿಸಲಾಗಿದೆ ಎಂದು ಶ್ರೀರಾಮ ಸೇನಾ  ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದರು.

ಹುಬ್ಬಳ್ಳಿ ಯಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.

ಇದರಲ್ಲಿ ಎಐಎಂಐಎಂ ಹಾಗೂ ಕಾಂಗ್ರೆಸ್ ಪಕ್ಷದ ಕೈವಾಡವಿದೆ, ಕಾಂಗ್ರೆಸ್ ಮುಖಂಡರಾದ ಅಲ್ತಾಪ್ ಹಳ್ಳೂರ, ಅಲ್ತಾಪ್ ನವಾಜ್ ಎಂ. ಕಿತ್ತೂರ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ನಗರದ ಎಲ್ಲಾ ಭಾಗಗಳಿಂದ ಜನರು ಗಲಭಗೆ ಬಂದಿದ್ದಾರೆ. ಸರಕಾರ ಗಲಭೆಕೋರರ ವಿರುದ್ಧ ಕೋಟಾ ಕಾಯ್ದೆ ಹೇರಬೇಕು ಎಂದು  ಹೇಳಿದ ಅವರು,  ಈ ಘಟನೆಗೆ ರಝಾ ಅಕಾಡೆಮಿ ಎಂಬ ಸಂಘಟನೆ ಕೈಜೋಡಿಸಿದೆ ಎಂದು ಹೇಳಿದರು.

ಸರ್ಕಾರ ಕಠಿಣವಾದ ಕ್ರಮ ಜರುಗಿಸದಿದ್ದರೇ ಹಿಂದೂಗಳು ಸುಮ್ಮನೆ ಇರುವುದಿಲ್ಲ.  ದೇವಸ್ಥಾನದ ಮೇಲಿನ ದಾಳಿ ಘಜ್ನಿ- ಘೋರಿ ಮನಸ್ಥಿತಿ ತೋರುತ್ತದೆ. 

ಗಲಭೆಗೆ ವಾಟ್ಸಾಪ್ ಸ್ಟೇಟಸ್ ಒಂದು ನೆಪ, ಮಸೀದಿ ಮೇಲೆ ಭಾಗವಾಧ್ವಜ ಹಾರಿಸಿದರೇ ಏನಾಗುತ್ತದೆ. ಬೆಂಗಳೂರಿನ ಮಸೀದಿ ಮೇಲೆ ಕೇಸರಿ ಧ್ವಜ, ಕೇಸರಿ ಹಿಜಾಬ್ ಹಾಕಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

ಈ ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳು ರಿಸ್ಕ್  ತೆಗೆದುಕೊಂಡು ಕಂಟ್ರೋಲ್ ಮಾಡಿದ್ದಾರೆ ಪೊಲೀಸ್ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುತಾಲಿಕ್ ಹೇಳಿದರು.

ಮೇ 9 ರೊಳಗೆ ಮಸೀದಿಗಳ ಮೇಲೆ ಮೈಕ್ ತೆರವು ಮಾಡದಿದ್ದರೇ ನಾವು ಹಿಂದೂ ದೇವಸ್ಥಾನಗಳಲ್ಲಿ ಮೈಕ್ ಹಚ್ಚುತ್ತೇವೆ. ಅಂದು ಓಂಕಾರ, ಭಜನೆ, ಸುಪ್ರಭಾತ ಹೀಗೆ ಕಾರ್ಯಕ್ರಮಗಳನ್ನು  ಆಯೋಜನೆ ಮಾಡಲಾಗುತ್ತದೆ ಎಂದು ತಿಳಿಸಿದರು.