ಬೆಂಗಳೂರು: ಪಿ ಎಸ್ ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಆರ್.ಡಿ.ಪಾಟೀಲ ಎಂಬಾತನನ್ನು ಶನಿವಾರ ಮಹಾರಾಷ್ಟ್ರದಲ್ಲಿ ಸಿಐಡಿಯವರು ಬಂಧಿಸಿದ್ದಾರೆ.
ಮಹಾರಾಷ್ಟ್ರದಿಂದ ಪಾಟೀಲನನ್ನು ಈಗ ಕಲಬುರಗಿಗೆ ಕರೆದೊಯ್ಯಲಾಗುತ್ತಿದೆ.
ಶುಕ್ರವಾರ ಮಹಂತೇಶ ಪಾಟೀಲ್ ಎಂಬಾತನನ್ನು ಬಂಧಿಸಲಾಗಿತ್ತು.ಶನಿವಾರ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕೇವಲ 545 ಅಷ್ಟೇ ಅಲ್ಲ ಮುಂದೆ ಪರೀಕ್ಷೆ ಬರೆಯಲಿರುವ 402 ಅಭ್ಯರ್ಥಿಗಳ ಆಯ್ಕೆ ಸಂಬಂಧವೂ ಈಗಲೇ ಗೋಲ್ ಮಾಲ್ ಪ್ರಾರಂಭವಾಗಿದೆ.
ಕೂಡಲೇ ಇದೆಲ್ಲದರ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲೇಬೇಕಿದೆ,ತಪ್ಪಿತಸ್ಥರಿಗೆ ಶಿಕ್ಷೆ ಯಾಗಬೇಕಿದೆ.