ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಹನೂರು:(ಚಾಮರಾಜನಗರ) ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರಾಮಲೆಕ್ಕಿಗನೊರ್ವ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಗ್ರಾಮಲೆಕ್ಕಿಗ ದಿನೇಶ್ ಎಂಬುವರೆ ಎಸಿಬಿ ಬಲೆಗೆ ಬಿದ್ದವರಾಗಿದ್ದಾರೆ.
ದಿನೇಶ್ ಅವರು ರಾಮಪುರ ಹೋಬಳಿಯ ಕುರಟ್ಟಿ ಹೊಸೂರು ವೃತ್ತದ ಗ್ರಾಮಲೆಕ್ಕಿಗ ರಾಗಿದ್ದು ಜಮೀನಿನ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 10000 ರೂಪಾಯಿಗೆ ಬೇಡಿಕೆಯಿಟ್ಟಿದ್ದರು.
ಈ ಬಗ್ಗೆ ಬಂದ ದೂರಿನ ಮೇರೆಗೆ ಡಿವೈಎಸ್ಪಿ ಸದಾನಂದ ತಿಪ್ಪಣ್ಣವರ ಇನ್ಸ್ಪೆಕ್ಟರ್ ಹರೀಶ್ ಹಾಗೂ ಸಿಬ್ಬಂದಿಗಳಾದ ನಾಗಲಕ್ಷ್ಮಿ ಮಹದೇವಸ್ವಾಮಿ ಕೃಷ್ಣಕುಮಾರ್ ದಾಳಿ ನಡೆಸಿ ಬಂದಿಸಿದ್ದಾರೆ.