ಪಿ.ಎಸ್.ಐ ಪರೀಕ್ಷಾ ಅಕ್ರಮ: ಮತ್ತೊಬ್ಬ ಆರೋಪಿ ಅರೆಸ್ಟ್

ಕಲಬುರಗಿ: ಪಿ.ಎಸ್.ಐ ಪರೀಕ್ಷಾ ಅಕ್ರಮ ಕುರಿತು ಸಿಐಡಿ ತನಿಖೆ ಚುರುಕುಗೊಳಿಸಿದ್ದು, ಬಂಧಿತ ಆರೋಪಿಗಳ ಸಂಖ್ಯೆ 40ರ ಗಡಿ ದಾಟಿದೆ.

ಬಿಧವಾರ ಬೆಂಗಳೂರಿನಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ.

ಇತ್ತ ಕಲಬುರಗಿಯಲ್ಲಿ ಇನ್ನೊಬ್ಬ ಆರೋಪಿ ತಾನಾಗಿಯೇ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಕಲಬುರಗಿಯ ಪರೀಕ್ಷ ಕೇಂದ್ರದಲ್ಲಿ ಒಟ್ಟು 8 ಅಭ್ಯರ್ಥಿಗಳು ಪರೀಕ್ಷೆ ಪಾಸ್ ಮಾಡಿದ್ದರು. ಅವರಲ್ಲಿ ಒಬ್ಬ ಅಭ್ಯರ್ಥಿ ಪ್ರಭು ಬ್ಲೂಟೂತ್ ಬಳಸಿ ಅಕ್ರಮವಾಗಿ ಪರೀಕ್ಷೆ ಪಾಸ್ ಮಾಡಿದ್ದರು.

ಮಂಗಳವಾರ ಆರೋಪಿ ಪ್ರಭುವಿನೊಂದಿಗೆ ಆತನ ತಂದೆ ಶರಣಪ್ಪನನ್ನೂ ಪೆÇಲೀಸರು ವಶಕ್ಕೆ ಪಡೆದಿದ್ದಾರೆ.

ಅಕ್ರಮ ಎಸಗಿದ ಅಭ್ಯರ್ಥಿ ಪ್ರಭು ನನ್ನು ಎಂಎಸ್‍ಐ ಕಾಲೇಜಿನಲ್ಲಿ ಮಹಜರು ನಡೆಸಲಾಗಿದೆ.

ಈತ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರು ಬಂದಕೂಡಲೇ ಪೊಲೀಸ್ ಹೇರ್‍ಸ್ಟೈಲ್ ಕಟಿಂಗ್ ಸಹ ಮಾಡಿಸಿಕೊಂಡಿದ್ದ.

ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ತನಿಖೆಯು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ನಡೆದಿದೆ.