ಚಾಮರಾಜನಗರಕ್ಜೆ ಬಂದು ತಲುಪಿದ ಚೈತನ್ಯ ಯಾತ್ರೆ

ವರದಿ:ರಾಮಸಮುದ್ರ ಎಸ್‌.ವೀರಭದ್ರಸ್ವಾಮಿ

ಚಾಮರಾಜನಗರ: ಕೆಆರ್‌ಎಸ್ ಪಕ್ಷದ ಜನ ಚೈತನ್ಯ ರಥಯಾತ್ರೆ ಶುಕ್ರವಾರ ಚಾಮರಾಜನಗರಕ್ಕೆ ತಲುಪಿತು.   

ಈ ಸಂದರ್ಭದಲ್ಲಿ ಮಾನಾಡಿದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಅವರು ರಾಜ್ಯದ ವಿವಿದ ಜಿಲ್ಲೆಗಳಲ್ಲಿ ಭ್ರಷ್ಟರೆ, ಪವಿತ್ರವಾದ ರಾಜಕಾರಣವನ್ನ ಬಿಟ್ಟು ತೊಲಗಿ, ನಾಡಪ್ರೇಮಿಗಳೆ ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ ಜಾಗೃತಿ ಅಬಿಯಾನ ಮಾಡುತ್ತಿದ್ದ ವಿವಿದ ಸರ್ಕಾರಿ ಕಚೇರಿಗಳ ಬೇಟಿ, ಅದಿಕಾರಿಗಳ ಕರ್ತವ್ಯ, ಅದಿಕಾರ ಕರ್ತವ್ಯಲೋಪದ ಬಗ್ಗೆ ಸಾರ್ವಜನಿಕರಿಗೆ ಭ್ರಷ್ಟಾಚಾರದ ಬಗ್ಗೆ  ಅರಿವು ಮೂಡಿಸಲಾಗುತ್ತಿದೆ. ಮತದಾರರು ಎಚ್ಚೆತ್ತು ಮತಚಲಾಯಿಸಬೇಕು ಎಂದರು.

 ಚಾಮರಾಜನಗರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ರವಿಕೃಷ್ಣ ರೆಡ್ಡಿ ಅವರು  ಡಿಎಚ್ ಒ ವಿಶ್ವೇಶ್ವರಯ್ಯ ಅವರನ್ನ ತರಾಟೆಗೆ ತೆಗೆದುಕೊಂಡರು. ಆಕ್ಸಿಜನ್ ದುರಂತದಲ್ಲಿ ಸಾವನ್ನಪ್ಪಿದವರೆಷ್ಟು? ಅವರಿಗೆ ಸರ್ಕಾರ ಕೊಟ್ಟಿರುವ ಪರಿಹಾರ, ವೈದ್ಯರ ಕೊರತೆ, ಇನ್ನಿತರ ಬಗ್ಗೆ ಮಾಹಿತಿ ಪಡೆದುಕೊಂಡರು.

ಇದಕ್ಕೆ ಉತ್ತರಿಸಿದ ಡಿಎಚ್ಒ ವಿಶ್ವೇಶ್ವರಯ್ಯ ಅವರು, ವೈದ್ಯರು ಪ್ರಾಣಕೊಟ್ಟು ಕೊವೆಡ್ ಸಮಯದಲ್ಲಿ ಕೆಲಸ ಮಾಡಿದ್ದಾರೆ. ಅಕ್ಸಿಜನ್ ದುರಂತದ ಸಂಬಂದ ಈಗಾಗಲೆ ನ್ಯಾಯಾಲಯದಲ್ಲಿ ದಾಖಲೆ ಕೂಡ ಇದೆ. ದುರಂತದಲ್ಲಿ ಮಡಿದವರಿಗೆ ಪರಿಹಾರ ಕೂಡ ಜಿಲ್ಲಾಡಳಿತ ನೀಡಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ  ರಾಜ್ಯ ಉಪಾಧ್ಯಕ್ಷ ಶಂಕರಲಿಂಗೇಗೌಡ,  ಜಿಲ್ಲಾಧ್ಯಕ್ಷರಾದ ಶ್ರೀನಿವಾಸಶಾಸ್ತ್ರಿ, ಗಿರಿಶ್,  ಸೋಮಸುಂದರ್  ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.