ಲಾರಿ ಪಲ್ಟಿ: ಪಾದಚಾರಿಗಳಿಬ್ಬರ ಸಾವು

ರಾಮಸಮುದ್ರ ಎಸ್.ವೀರಭದ್ರಸ್ವಾಮಿ           

ಚಾಮರಾಜನಗರ:  ಕಬ್ಬಿನ ಲೋಡು ತುಂಬಿದ ಲಾರಿ ಪಲ್ಟಿ ಹೊಡೆದ ಪರಿಣಾಮ ಪಾದಚಾರಿಗಳಿಬ್ಬರು ಸಾವನ್ನಪ್ಪಿದ ಘಟನೆ ಡಿವಿಯೇಷನ್ ರಸ್ತೆಯಲ್ಲಿ ನಡೆದಿದೆ.  

ಉತ್ತರ ಪ್ರದೇಶ  ಮೂಲದ ಅತುಲ್ (17), ಮಯೂರ್ (17) ಎಂಬುವವರೆ  ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ‌.

ಸಂತೇಮರಳ್ಳಿ ವೃತ್ತದಿಂದ ಪಚ್ಚಪ್ಪ ವೃತ್ತದೆಡೆಗೆ ಬರುವ ಮಾರ್ಗ ಮದ್ಯೆ ಇರುವ ತಿರುವಿನಲ್ಲಿ ಪಾದಚಾರಿಗಳಿಬ್ಬರು ಬರುತ್ತಿದ್ದರು.ಈ ನಡುವೆ ಕಬ್ಬು ತುಂಬಿದ ಲಾರಿ ಪಲ್ಟಿಯಾಗಿ ಅವರ ಮೇಲೆ ಬಿದ್ದಿದೆ. ಸಾವನ್ನಪ್ಪಿದ ಇಬ್ಬರೂ ಚಾಮರಾಜನಗರಕ್ಕೆ ಬಟ್ಟೆ ವ್ಯಾಪಾರ ಮಾಡಲು ಬಂದಿದ್ದರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಡಿವೈಸ್ಪಿ ಪ್ರಿಯದರ್ಶಿ ಸಾನಿಕೊಪ್ಪ,ಸಂಚಾರಿ ಠಾಣೆಯ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಪಟ್ಟಣ ಠಾಣಾ ಪೊಲೀಸರು ಬಂದು ರಸ್ತೆಗೆ ಬಿದ್ದಿದ್ದ ಕಬ್ಬನ್ನ ತೆರೆವು ಮಾಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ನಂತರ ಸ್ಥಳಕ್ಕೆ ಆಗಮಿಸಿದ ಎಸ್ಪಿ ಶಿವಕುಮಾರ್ ಅವರು ಮಾದ್ಯಮದವರೊಂದಿಗೆ ಮಾತನಾಡಿ ಘಟನೆ ಬಗ್ಗೆ ತಿಳಿಸಿ‌.ಪದೆ ಪದೆ ರಸ್ತೆಯಿಂದಾಗುತ್ತಿರುವ ತಾಂತ್ರಿಕತೆ, ಅವೈಜ್ಞಾನಿಕ ರಸ್ತೆ ನಿರ್ಮಾಣ ಸಮಸ್ಯೆ ಇಂದ ಅಪಘಾತವಾಗುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೆ ಲೋಕೋಪಯೋಗಿ ಇಲಾಖೆ ಸಬೆ ಕರೆದು ಚರ್ಚಿಸಲಾಗುವುದು ಎಂದರು.

ಚಾಮರಾಜನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂದ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.