ಎಸಿಬಿ ಬಲೆಗೆ ಬಿದ್ದ ರಾಜಸ್ವ ನಿರೀಕ್ಷಕ  

ವರದಿ: ರಾಮಸಮುದ್ರ ಎಸ್‌.ವೀರಭದ್ರಸ್ವಾಮಿ
ಚಾಮರಾಜನಗರ: ತಾಲ್ಲೋಕಿನ ಗುಂಡ್ಲುಪೇಟೆಯಲ್ಲಿ   ಜಮೀನನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಿಕೊಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದು, ಅದನ್ನ  ಪರಿಶೀಲನೆ  ಮಾಡಿ ಶಿಪಾರಸ್ಸು ಮಾಡಲು ಲಂಚ ಕೇಳಿದ ಆರೋಪದ ಮೇರೆಗೆ ರಾಜಸ್ವ ನಿರೀಕ್ಷಕ ಎಸಿಬಿ ಬಲೆಗೆ ಬಿದ್ದಿದ್ದಾರೆ.  

ಗುಂಡ್ಲುಪೇಟೆ ತಾಲ್ಲೂಕು, ಕಸಬಾ ಹೋಬಳಿಯ  ನಾಡಕಛೇರಿಯ ಆರ್.ಐ ಶ್ರೀನಿವಾಸಮೂರ್ತಿ ಎಂಬುವವರೆ  ಎಸಿಬಿ ಬಲೆಗೆ ಬಿದ್ದವರಾಗಿದ್ದಾರೆ.

ಪಿರ್ಯಾದುದಾರರು ಅನ್ಯಕ್ರಾಂತಕ್ಕಾಗಿ ಅರ್ಜಿ ಸಲ್ಲಿಸಲಾಗಿ ಅದನ್ನ ಸಂಬಂದಿಸಿದ ರಾಜಸ್ವ ನಿರೀಕ್ಷಕರು ಪರಿಶೀಲಿಸಿ ಶಿಫಾರಸ್ಸು ಮಾಡಬೇಕಾಗಿರುತ್ತದೆ‌.

ಪಿರ್ಯಾದುದಾರರು ಭೇಟಿ ಮಾಡಿ ವಿಚಾರಿಸಿದಾಗ, ಸದರಿಯವರು ಪಿರಾದುದಾರರ ಅರ್ಜಿಯನ್ನು ಶಿಫಾರಸ್ಸು ಮಾಡಲು 4 ಸಾವಿರ ಲಂಚ ಕೊಡುವಂತೆ  ಬೇಡಿಕೆ ಇಟ್ಟು, ಒತ್ತಾಯಿಸಿರುತ್ತಾರೆಂದು ದೂರು ಸಲ್ಲಿಸಿದ್ದರು.

ಮೈಸೂರು ದಕ್ಷಿಣ ವಲಯ ಭ್ರಷ್ಟಾಚಾರ ನಿಗ್ರಹ ದಳದ ಅದೀಕ್ಷಕರಾದ ವಿ.ಜೆ.ಸಜೀತ್ ಅವರ ಮಾರ್ಗದರ್ಶನದಲ್ಲಿ ಚಾಮರಾಜನಗರ ಭ್ರಷ್ಟಾಚಾರ ನಿಗ್ರಹ ದಳದ  ಡಿವೈಸ್ಪಿ ಸದಾನಂದ ತಿಪ್ಪಣ್ಣನ್ನವರ್ ಹಾಗೂ ಇನ್ಸ್ ಪೆಕ್ಟರ್ ,ಸಿಬ್ಬಂದಿಗಳು   ಕಾರ್ಯಾಚರಣೆ ಬಾಗವಹಿಸಿದ್ದರು.

 ಆರೋಪಿತರಾದ ಸರ್ಕಾರಿ ನೌಕರರಾದ  ಶ್ರೀನಿವಾಸಮೂರ್ತಿ ಅವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಯಲ್ಲಿ ಪಿರ್ಯಾದು ಸ್ವೀಕರಿಸಿದ 4,000 ರೂ ಲಂಚದ ಹಣವನ್ನು ಜಪ್ತಿ ಮಾಡಿ , ಆರೋಪಿತರನ್ನ ವಶಕ್ಕೆ ಪಡೆಯಲಾಗಿದೆ.