(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ನಗರಕ್ಕೆ ಆಗಮಿಸಿದ ಇತಿಹಾಸ ಪ್ರಸಿದ್ದ ಶ್ರೀ ಚಾಮರಾಜೇಶ್ವರ ನೂತನ ರಥವನ್ನು ಶುಕ್ರವಾರ ಬೆಳಿಗ್ಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಚಾಮರಾಜೇಶ್ವರ ರಥ ಉರಿದು ಭಗ್ನ ವಾಗಿತ್ತು. ನಂತರದ ದಿನಗಳಲ್ಲಿ ರಥೋತ್ಸವ ನಿಂತು ಹೋಗಿತ್ತು.
ಬೆಂಗಳೂರಿನ ಕಾಮಾಕ್ಷಿ ಪಾಳ್ಯದಲ್ಲಿ 1.20 ಕೋಟಿದಲ್ಲಿ ಹೊಸ ರಥವನ್ನು ನಿರ್ಮಾಣ ಮಾಡಲಾಗಿದೆ.
ಮೇ 12ರಂದು ನೂತನ ರಥಕ್ಕೆ ಶಿಲ್ಪಿಗಳು ಮತ್ತು ಶಾಸಕ ಪುಟ್ಟರಂಗಶಟ್ಟಿ ಪೂಜೆ ಸಲ್ಲಿಸಲಿದ್ದರು.
ಶುಕ್ರವಾರ ಬೆಳಿಗ್ಗೆ 9.30 ಕ್ಕೆ ಚಾಮರಾಜನಗರದ ಆದಿಶಕ್ತಿ ದೇವಸ್ಥಾನದ ಬಳಿ ತಲುಪಿದ ರಥಕ್ಕೆ ಶಾಸಕ ಸಿ.ಪುಟ್ಟರಂಗ ಶೆಟ್ಟಿ, ನಗರಸಭೆಯ ಅದ್ಯಕ್ಷೆ ಆಶಾ ಇನ್ನಿತರ ಜನಪ್ರತಿನಿಧಿಗಳು ಪೂಜೆ ಸಲ್ಲಿಸಿ ಬರಮಾಡಿಕೊಂಡರು.
ಬಳಿಕ ರಥವು ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ,ಜೈ ಭುವನೇಶ್ವರಿ ವೃತ್ತ, ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣ, ಗುಂಡ್ಲುಪೇಟೆ ವೃತ್ತ, ಚಿಕ್ಕಂಗಡಿ ಬೀದಿ ಮೂಲಕ ಸಾಗಿ ಚಾಮರಾಜೇಶ್ವರ ದೇವಾಲಯದ ಮುಂಬಾಗದ ರಸ್ತೆ ಮೂಲಕ ಆಗಮಿಸಿತು.
ದೇವಾಲಯದ ಸುತ್ತಲು ಪ್ರದಕ್ಷಿಣೆ ಹಾಕಿದ ನಂತರ ದೇವಸ್ಥಾನದ ಆವರಣದಲ್ಲಿ ರಥವನ್ನು ನಿಲ್ಲಿಸಲಾಯುತು.
ಪೂಜೆಯಲ್ಲಿ ವಿವಿದ ಕೋಮಿನ ಯಜಮಾನರುಗಳು,ಮುಖಂಡರು ಭಾಗವಹಿಸಿದ್ದರು.