ಪಿ ಎಸ್ ಐ ಗೆ ಒಂದೇ ವಾರದಲ್ಲಿ ಮೂರು ಕಡೆ ವರ್ಗಾವಣೆ!

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಪಿಎಸ್ಐ ಒಬ್ಬರನ್ನ ಒಂದೇ ವಾರದಲ್ಲಿ ಮೂರು ಬಾರಿ ವರ್ಗಾವಣೆ ಮಾಡಲಾಗಿದ್ದು ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪಿಎಸ್ಐ ಆಗಿದ್ದ ಡಿ.ಆರ್.ರವಿಕುಮಾರ್ ಎಂಬವರು ಪದೆ ಪದೇ ವರ್ಗಾವಣೆ ಪೇಚಿಗೆ ಸಿಲುಕಿಕೊಂಡಿದ್ದಾರೆ.

ಕಳೆದ 6 ರಂದು ಬೇಗೂರು ಠಾಣೆಗೆ ಇವರನ್ನು ರಾಮಸಮುದ್ರ ಪೂರ್ವ ಠಾಣೆಯಿಂದ  ವರ್ಗಾವಣೆ ಮಾಡಲಾಗಿತ್ತು. ಬಳಿಕ, 7 ರಂದು ವರ್ಗಾವಣೆ ಆದೇಶ ಮಾರ್ಪಡಿಸಿ ಬೇಗೂರು ಠಾಣೆಯಿಂದ ಗುಂಡ್ಲುಪೇಟೆ ಠಾಣೆ ಅಪರಾಧ ವಿಭಾಗದ ಪಿಎಸ್ಐ ಆಗಿ ಟ್ರಾನ್ಸ್‌ಫರ್ ಮಾಡಲಾಗಿದೆ.

ಇದಾದ ನಂತರ, ಕಳೆದ 11 ರಂದು ಗುಂಡ್ಲುಪೇಟೆ ಠಾಣೆಯಿಂದ ಕೊಡಗು ಜಿಲ್ಲೆಯ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆ ಮಾಡಲಾದ ಸ್ಥಳಗಳಿಗೆ ಪಿಎಸ್ಐ ರಿಪೋರ್ಟ್ ಮಾಡಿಕೊಂಡಿರಲಿಲ್ಲ ಎಂದು ತಿಳಿದುಬಂದಿದೆ.

ವಾರದಲ್ಲಿ  ರವಿಕುಮಾರ್ 3 ಬಾರಿ ವರ್ಗಾವಣೆಯಾಗಿರುವ ವಿಚಾರ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಈ ಸಂಬಂದ ಕಾರಣ ತಿಳಿದುಕೊಳ್ಳಲು ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕರನ್ನಾಗಲಿ, ಚಾಮರಾಜನಗರ ಎಸ್ಪಿ ಅವರನ್ನಾಗಲಿ ಸಂಪರ್ಕಿಸಿದರೂ  ಯಾವುದೇ ಪ್ರಯೋಜನವಾಗಲಿಲ್ಲ.