ಮೈಸೂರು: ಪ್ರೀತಿ, ಪ್ರೇಮದ ಬಲೆಗೆ ಬಿದ್ದು ಹುಡುಗಿಯರು ಮೋಸ ಹೋಗುವ ಪ್ರಕರಣಗಳು ಮುಗ್ದೆಯರು ಎಚ್ಚೆತ್ತುಕೊಳ್ಳದ ವರೆಗೂ ನಡೆಯುತ್ತಲೇ ಇರುತ್ತವೆ.ಇದಕ್ಕೆ ಇಲ್ಲೊಂದು ಅಪ್ಪಟ ಉದಾಹರಣೆ ಇದೆ.
ಅದರಲ್ಲೂ ಸಾಮಾಜಿಕ ಜಾಲತಾಣಗಳು ಹುಟ್ಟಿಕೊಂಡ ನಂತರ ಇಂತಹ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.
ಮೈಸೂರು ಮೂಲದ ಯುವತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿಕೊಂಡ ಕಾಮುಕ ಪ್ರೀತಿಯ ನಾಟಕವಾಡಿ ದೈಹಿಕವಾಗಿ ಬಳಸಿಕೊಂಡು ಲಕ್ಷಾಂತರ ರೂ.ಹಣವನ್ನು ಕೀಳುತ್ತಿದ್ದ.
ಇಗೀಗ ಈ ಕಾಮುಕನನ್ನು ಮೈಸೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಂಜನಗೂಡು ತಾಲೂಕಿನ ಬಸವಟಿಕೆ ಗ್ರಾಮದ ಶಿವಪ್ರಕಾಶ್ ಬಿ.ಜಿ ಬಂಧಿತ ಆರೋಪಿ.
ಈತ ಯುವತಿಯನ್ನು ದೈಹಿಕವಾಗಿ ಬಳಸಿಕೊಂಡು ನಂತರ ಆಕೆಯೊಂದಿಗಿನ ಖಾಸಗಿ ಕ್ಷಣಗಳನ್ನು ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ.
ಹೀಗೆ ಸುಮಾರು 20ಲಕ್ಷರೂ.ಹಣವನ್ನು ಪಡೆದುಕೊಂಡಿದ್ದ. ಈತನ ಕಿರುಕುಳದಿಂದ ನೊಂದ ಯುವತಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಬುಧವಾರ ಕಾಮುಕನನ್ನು ಬಂಧಿಸಿದ್ದಾರೆ.
ವಿಕೃತ ಕಾಮಿಯಾಗಿದ್ದ ಈತ ಗೂಗಲ್ ಮೀಟ್, ಫೇಸ್ ಬುಕ್ ಮೂಲಕ ಯುವತಿಯರನ್ನು ಪರಿಚಯಿಸಿಕೊಳ್ಳುತ್ತಿದ್ದ.
ನಂತರ ಪ್ರೀತಿಯ ಮಾತುಗಳಿಂದ ತನ್ನ ಬಲೆಗೆ ಬೀಳುವ ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಡು ವಿಡಿಯೋ ಮಾಡಿಟ್ಟುಕೊಂಡು ಹಣ ಕೀಳುತ್ತಿದ್ದ.
ಇದೇ ರೀತಿ ಮೈಸೂರು ಮೂಲದ ಯುವತಿಯ ಜೊತೆಯೂ ಪ್ರೀತಿ ಪ್ರೇಮದ ನಾಟಕವಾಡಿ ದೈಹಿಕವಾಗಿ ಬಳಸಿಕೊಂಡು ಹಣ ಕಿತ್ತಿದ್ದ.
ಈಗ ಕಾಮುಕ ಕಂಬಿ ಎಣಿಸುತ್ತಿದ್ದಾನೆ.