ನಡುಬೀದಿಯಲ್ಲಿ ರೌಡಿಗಳಂತೆ ಗುದ್ದಾಡಿದ ಪ್ರತಿಷ್ಟಿತ ಶಾಲೆಯ ವಿದ್ಯಾರ್ಥಿನಿಯರು

ಬೆಂಗಳೂರು: ಬೆಂಗಳೂರು ‌ಮಾಹಾನಗರದಲ್ಲಿ‌‌‌ ನಡು‌ ಬೀದಿಯಲ್ಲಿ ರೌಡಿಗಳು,ಪುಂಡು ಪೋಕರಿಗಳು ಬಡಿದಾಡುವುದು ಸಾಮಾನ್ಯ.ಆದರೆ‌ ಅದೇ ಮಾದರಿಯಲ್ಲಿ ಹುಡುಗಿಯರು ಹೊಡಿದಾಡಿರುವುದು‌ ಅಚ್ಚರಿ ಮೂಡಿಸಿದೆ.

ಬೆಂಗಳೂರಿನ ಹೆಸರಾಂತ‌‌ ಶಾಲೆಗಳ ಹುಡುಗಿಯರು ರೌಡಿಗಳಂತೆ ಹೊಡೆದಾಡಿಕೊಂಡ‌ ದೃಶ್ಯ ‌ಇದೀಗ ವೈರಲ್ ಆಗಿದೆ.

ಪ್ರತಿಷ್ಟಿತ ಬಿಷಪ್​ಕಾಟನ್​ ಹಾಗೂ ಬಾಲ್ಡ್​ವಿನ್ಸ್ ವಿದ್ಯಾರ್ಥಿನಿಯರು

ನಡುರಸ್ತೆಯಲ್ಲೇ ರೌಡಿಗಳಂತೆ ಮನಬಂದಂತೆ ಹೊಡೆದಾಡಿದ್ದಾರೆ.

ಅದರಲ್ಲೂ ಹಾಕಿ ಸ್ಟಿಕ್​ ಹಿಡಿದು ಗೂಂಡಾಗಳಂತೆ ಜಗಳವಾಡಿದ್ದಾರೆ.ಒಬ್ಬಳ ಜುಟ್ಟನ್ನು ಇನ್ನೊಬ್ಬಳು ಎಳೆದು ತದಕುವುದು ನೋಡಿದರೆ ಅಸಹ್ಯವಾಗುತ್ತದೆ.

ಇದೇನಾ ಶಾಲೆಗಳಲ್ಲಿ ಸ್ಟೂಡೆಂಟ್ಸ್​ ಗೆ ನೈತಿಕತೆ ಕಲಿಸುತ್ತಿರುವುದು,ಇದಕ್ಕಾಗಿ ಲಕ್ಷ,ಲಕ್ಷ ಕೊಟ್ಟು ಸುಪ್ರಸಿದ್ದ ಶಾಲೆಗಳಿಗೆ ಸೇರಿಸಬೇಕೆ ಎಂಬ ಪ್ರಶ್ನೆ ಮೂಡುತ್ತಿದೆ.

ಈ ಸ್ಟೂಡೆಂಟ್ಸ್‌ ಗಳ ಫೈಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್​ ಆಗಿದ್ದು ಛೀ ತೂ ಎಂದು ಸಾರ್ವಜನಿಕರು ಬಯ್ಯುತ್ತಿದ್ದಾರೆ.

ಈ ವಿದ್ಯಾರ್ಥಿನಿಯರು ಶಾಲಾ ಆವರಣದಲ್ಲೇ  ಮಾರಾಮಾರಿ ಮಾಡುವ ಮೂಲಕ ಪ್ರಸಿದ್ದ ಶಾಲೆಗಳಿಗೆ ಮಸಿ ಬಳಿದಿದ್ದಾರೆ.