ಪೌಲ್ಟ್ರಿ ಫಾರಂ ನಲ್ಲಿ ಕಾರ್ಮಿಕ ಅನುಮಾನಾಸ್ಪದ ಸಾವು

ಮೈಸೂರು: ಪೌಲ್ಟ್ರಿ ಫಾರಂನಲ್ಲಿ ಕೂಲಿ ಕಾರ್ಮಿಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಂಜನಗೂಡಿನ ಸೂರಳ್ಳಿ ಗ್ರಾಮದಲ್ಲಿ ನಡೆದಿದೆ.


ಶ್ರೀನಿವಾಸ್ ಶೆಟ್ಟಿ (40) ಮೃತ ಕೂಲಿ ಕಾರ್ಮಿಕ.


ಮೈಸೂರು ಮೂಲದ ಉಮೇಶ್ ಎಂಬುವರಿಗೆ ಸೇರಿದ ಪೌಲ್ಟ್ರಿ ಫಾರಂನಲ್ಲಿ ಈ ಘಟನೆ ನಡೆದಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಶ್ರೀನಿವಾಸ್ ಶೆಟ್ಟಿ ಮೃತದೇಹ ಕಂಡು ಬಂದಿದೆ.


ಒಂದು ವರ್ಷದಿಂದ ಪೌಲ್ಟ್ರಿ ಫಾರಂ ಹಾಗೂ ಮೇಕೆ ಸಾಕಣಿಕೆ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಶೆಟ್ಟಿ, ಮಲಗಿರುವ ಸ್ಥಿತಿಯಲ್ಲೇ ಕುತ್ತಿಗೆಗೆ ಹಗ್ಗ ಹಾಕಿರುವ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ.
ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.


ನಂಜನಗೂಡು ಟೌನ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.