ಮೈಸೂರು: ಕುಡಿತದ ಚಟಕ್ಕೆ ದಾಸಳಾಗಿದ್ದ ಗೃಹಿಣಿಯೊಬ್ಬರು ಸಾವಿಗೆ ಶರಣಾಗಿರುವ ಘಟನೆ ಮೈಸೂರಿನ ಆಲನಹಳ್ಳಿ ಬಡಾವಣೆಯಲ್ಲಿ ನಡೆದಿದೆ.
ನಾಗರತ್ನ (29) ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ.
ಕಳೆದ 10 ವರ್ಷಗಳ ಹಿಂದೆ ಪ್ರಾವಿಷನ್ ಸ್ಟೋರ್ಸ್ ನಡೆಸುತ್ತಿದ್ದ ವೆಂಕಟಾದ್ರಿ ಎಂಬುವರನ್ನು ವಿವಾಹವಾಗಿದ್ದ ನಾಗರತ್ನ ಒಂದು ಮಗುವಿನ ತಾಯಿ ಆಗಿದ್ದರು.
ಕುಡಿತದ ಚಟಕ್ಕೆ ದಾಸಳಾಗಿದ್ದ ನಾಗರತ್ನ ಮಾನಸಿಕವಾಗಿಯೂ ಅಸ್ವಸ್ಥಳಾಗಿದ್ದರು ಎನ್ನಲಾಗಿದೆ.
ಗಂಡ ಪ್ರಾವಿಷನ್ ಸ್ಟೋರ್ಸ್ ಗೆ ತೆರಳಿದ ನಂತರ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಲನಹಳ್ಳಿ ಪೆÇಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.