ನಾಲ್ಕು ಪಟ್ಟು ಹಣ ವಸೂಲಿ: ಪ್ರವಾಸಿಗರ ಆರೋಪ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ     

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಜಲಪಾತ ಹೊಗೆನಕಲ್‍ನಲ್ಲಿ ದೋಣಿ ವಿಹಾರಕ್ಕೆ ತಲೆಗೆ 125ರ ಬದಲು 500 ರೂ ಹಣ ವಸೂಲಿ ಮಾಡುವ ಮೂಲಕ ಅಧಿಕ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಪ್ರವಾಸಿಗರಿಂದ ಆರೋಪ ಕೇಳಿಬಂದಿದೆ.      

ಅರಣ್ಯ ಇಲಾಖೆ ದೋಣಿ ಸವಾರಿಗೆ ತಲಾ ಒಬ್ಬರಿಗೆ 125 ರೂ. ಶುಲ್ಕ ವಿಧಿಸಿದೆ. ಆದ್ರೆ ತೆಪ್ಪ ಓಡಿಸುವವರು ತಲೆಗೆ 500 ರೂ ನಂತೆ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದು, ಜೊತೆಗೆ ಎಲ್ಲರಿಗೂ ಕೂಡ ಲೈಫ್ ಜಾಕೆಟ್ ನೀಡಬೇಕು. ಆದರೆ ಯಾವುದನ್ನ ನೀಡದೆ, ಯಾವ್ದೆ  ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ ಎಂದು  ಆರೋಪಸಿದ್ದಾರೆ.

125 ರೂ. ಶುಲ್ಕದಂತೆ ನಾಲ್ಕು ಜನರಿಗೆ 500 ರೂ ಪಡೆಯಬೇಕು ಅದರ ಬದಲು  ನಾಲ್ಕು ಜನರ ಸವಾರಿಗೆ 1,500 ರಿಂದ 2000 ರೂ.ವರೆಗೂ ಡಿಮ್ಯಾಂಡ್ ಮಾಡ್ತಿದ್ದಾರೆಂದು ಬರುವ ಪ್ರವಾಸಿಗರು ತೆಪ್ಪ ನಡೆಸುವವರ ವಿರುದ್ಧ ಆರೋಪ ಹೊರಿಸಿದ್ದಾರೆ.

ಈ ಹಗಲು ದರೋಡೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳದಲ್ಲಿ ಇರಬೇಕಾದ ಅರಣ್ಯ ಇಲಾಖೆಯ ಒಬ್ಬ ಸಿಬ್ಬಂದಿಯೂ ಕೂಡ ಸ್ಥಳದಲ್ಲಿ ಇರೋದಿಲ್ಲ. ಪ್ರಾಣಕ್ಕೆ ಸಂಚಕಾರ ಉಂಟಾಗುವ ಪರಿಸ್ಥಿತಿಯೂ ಕೂಡ ಇದ್ದು, ಅರಣ್ಯಾಧಿಕಾರಿಗಳು ಎಚ್ಚೆತ್ತು ಅಧಿಕ ಶುಲ್ಕ ವಸೂಲಿ ಮಾಡುವವರ ವಿರುದ್ಧ ಕ್ರಮವಹಿಸಲು ಆಗ್ರಹಿಸಿದ್ದಾರೆ.