ನಮಗೆ ಭೂಮಿ ಪರಿಸರ ಅನಿವಾರ್ಯ;ಪರಿಸರಕ್ಕ ನಾವಲ್ಲ

ಚಾಮರಾಜನಗರ: ನಮಗೆ ಭೂಮಿ,ಪರಿಸರ ಅನಿವಾರ್ಯವೊ ಹೊರತು  ಭೂಮಿ ಪರಿಸರಕ್ಕೆ ನಾವು ಅನಿವಾರ್ಯವಲ್ಲ ಎಂದು ಕಾನೂನುಸೇವೆಗಳ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ್ ಅವರು ಹೇಳಿದರು‌.

 ಅವರು  ನೆಹರು ಯುವ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು  ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪರಿಸರ ದಿನಾಚರಣೆ ದಿನ ಕೇವಲ ಒಂದೆರಡು ಗಿಡಗಳನ್ನು ನೆಟ್ಟು ಹೋಗುವಂತಹ ಕಾರ್ಯಕ್ರಮವಲ್ಲ, ಹಿಂದೆ ಆಗಿರತಕ್ಕ ತಪ್ಪುಗಳನ್ನ ಪುನರ್ಮನ ಮಾಡಿಕೊಳ್ಳುವ ಮೂಲಕ ಯಾವ ರೀತಿ ಸರಿ‌ ಮಾಡಿಕೊಳ್ಳಬೇಕು,ಮುಂದಿನ ಪೀಳಿಗೆಗೆ ನಾವು ಉತ್ತಮ ಪರಿಸರವನ್ನ ನೀಡುವ ಜವಾಬ್ದಾರಿ ನಮ್ಮದಾಗಿರುತ್ತಾದೆ ಎಂದರು. 

ಭೂಮಿಗೆ ನಾವು ಅನಿವಾರ್ಯವಲ್ಲ , ನಮಗೆ ಭೂಮಿ ಅನಿವಾರ್ಯ, ಪರಿಸರ ಅನಿವಾರ್ಯ ಎಲ್ಲಾ ಜೀವ ಸಂಕುಲಗಳು ಸೃಷ್ಟಿಯ ಭಾಗವಾಗಿದ್ದು ಇಂದು
ಅರಣ್ಯ ಮೇಲೆ ಅವ್ಯಾಹತವಾಗಿ ದೌರ್ಜನ್ಯ ನಡೆಯುತ್ತಿದೆ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ತಡೆಯಲು ನಮ್ಮ ಜವಬ್ದಾರಿ ಕೂಡ ಹೆಚ್ಚು ಎಂದರು.

ಕೈಗಾರಿಕಾ ಕ್ರಾಂತಿಯಿಂದ ಹಳ್ಳಿಗಳು ಪಟ್ಟಣಗಳಾದವು ,ಪಟ್ಟಣ ನಗರಗಳಾದವು, ಕಾಡುಗಳು ನಾಶವಾದವು ಎತ್ತಾ ನೋಡಿದರತ್ತ ಕಾಂಕ್ರೀಟ್ ಮಯವಾಗುತ್ತಿದೆ ಇದರಿಂದ ಪ್ರಕೃತಿ ಮೇಲೆ ಹಲ್ಲೆಯಾಗುತ್ತಿದೆ ಎಂದರೆ ತಪ್ಪಾಗಲಾರದು. ಇದಕ್ಕಾಗಿ ಹೋರಾಟ ಅನಿವಾರ್ಯವಾಗಿದೆ. ಪರಿಸರ ಉಳಿಸಲು ಉತ್ತಮ ವಾತಾವರಣ ಸೃಷ್ಟಿಸುವ ಜವಬ್ದಾರಿ ನಮ್ಮ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ,ಸಾಮಾಜಿಕ ಅರಣ್ಯ ಇಲಾಖೆ ಎಸಿಎಪ್ ಸಭ್ಯಶ್ರಿ ಮಾತನಾಡಿ ಪರಿಸರ ಕಾಪಾಡುವಲ್ಲಿ ಪ್ರತಿಯೊಬ್ಬ ಪ್ರಜೆಯ ಜವಬ್ದಾರಿ ಪಾತ್ರ ಅಪಾರ.ಅದರಲ್ಲೂ ಅರಣ್ಯ ಸಂಪತ್ತು,ಪರಿಸರ ಕಾಪಾಡಿದರೆ ಉತ್ತಮ ಗಾಳಿ ದೊರೆಯಲಿದೆ. ಆಕ್ಸಿಜನ್ ಗಾಗಿ ಬೇರೆ ಬೇರೆದೇಶಗಳಲ್ಲಿ ಕೋಟಿಗಟ್ಟಲೆ ಹಣ ವ್ಯಯಿಸಬೇಕಾಗುತ್ತದೆ. ಪ್ರತಿಯೊಬ್ಬರೂ ಒಂದೊಂದು ಗಿಡ ನೆಡುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಬೇಕು ಎಂದರು.    

ಎಎಸ್ಪಿ ಸುಂದರರಾಜು, ಪರಿಸರಪ್ರೇಮಿ ವೆಂಕಟೇಶ್  ಸೇರಿದಂತೆ ಇತರರು ಹಾಜರಿದ್ದರು