ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಜಿಲ್ಲೆಯ ಬಹುತೇಕ ಉಪಠಾಣೆಗಳು ಹೆಸರಿಗಷ್ಟೆ ಇದ್ದರೂ ಠಾಣೆಯಲ್ಲಿ ಇರೊದು ಕನಸಿನ ಮಾತಾಗಿದೆ ಎಂದರೆ ತಪ್ಪಾಗಲಾರದು.
ಇತ್ತೀಚೆಗೆ ಬಿಳಿಗಿರಿರಂಗನ ಬೆಟ್ಟದ ಉಪಠಾಣೆಯಲ್ಲಿ ಬಾಗಿಲು ಹಾಕಿದ್ದ ಪೊಟೊ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಆದರೆ ಅದಿಕಾರಿಗಳು ಠಾಣೆಯೊಳಗೆ ಇದ್ದರು ಎಂದು ಸಮಜಾಯಿಸಿ ಉತ್ತರ ನೀಡಿದ್ದಾದರೂ ಬಾಗಿಲು ಹಾಕಿಕೊಂಡು ನಿದ್ದೇನೊ ಮತ್ತೇನೊ ಮಾಡಬಹುದಾ ಎಂಬ ಪ್ರಶ್ಬೆಗೆ ಮಾತ್ರ ಉತ್ತರ ಇರಲಾರದಂತಾಯಿತು.
ಚಾಮರಾಜನಗರ ಗುಂಡ್ಲುಪೇಟೆ ತಾಲ್ಲೋಕಿನ ಬಂಡೀಪುರ ಉಪಠಾಣೆ ಕೂಡ ಒಂದು ಎಎಸ್ಐನೊ ಅಥವಾ ಒಂದು ಮುಖ್ಯಪೇದೆ ,ಮೂರು ಪೇದೆಯನ್ನೊ ಈ ಉಪಠಾಣೆಗೆ ನೀಡಲಾಗಿದೆ.
ಆದರೆ ಕೆಲವು ಸಾರ್ವಜನಿಕರು ಹೇಳೊ ಪ್ರಕಾರ ಚೆಕ್ ಪೊಸ್ಟ್ ಇದ್ದಾಗ ಯಾರೂ ಇಲ್ಲ ಎಂಬ ಮಾತೇ ಇರುತ್ತಿರಲಿಲ್ಲ.
ಈಗ ಚೆಕ್ ಪೊಸ್ಟ್ ಇಲ್ಲವಾದ ಮ್ಯಾಲೆ ಇರ್ತಾರೆ ಅನ್ನೊ ಮಾತೆ ಇರೊಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.
ಬಂಡಿಪುರ ಉಪಠಾಣೆಗೆ ನಿಯೋಜನೆಯಾಗೊ ಮುಖ್ಯಪೇದೆ, ಪೇದೆಯೊ ಹೆಸರಿಗಷ್ಟೆ ಇದ್ದರೂ ಬೇರೆಡೆ ಓಓಡಿಯಾಗಿ ಕೆಲಸ ಮಾಡುತ್ತಾರೆ ಎಂಬ ಸತ್ಯವೂ ಗೋಚರಿಸಿದೆ.
ಹಿಂದೆ ಇದ್ದ ಎಸ್ಪಿ ದಿವ್ಯಸಾರಾ ಥಾಮಸ್ ಅವರು ಓಓಡಿ ರದ್ದು ಮಾಡಿದ್ದರು. ಆದರೂ ಕೆಲವರು ಹೋಗದೆ ಉದ್ದಟತನ ವರ್ತಿಸಿ ಹಿರಿಯ ಅದಿಕಾರಿಗಳ ಬೆಂಬಲದಿಂದ ಅಲ್ಲೆ ಉಳಿದಿದ್ದಾರೆ. ಆದರೆ ಇದು ಎಸ್ಪಿ ಅವರಿಗಾಗಲಿ, ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕರಿಗಾಗಲಿ ತಿಳಿಯದೆ ಇರೋದು ಅಚ್ಚರಿ ಮೂಡಿಸಿದೆ.