ನಶೆ ಘಾಟು : ಬಾಲಿವುಡ್ ನಟ ಸಿದ್ದಾಂತ್ ಕಪೂರ್‌ ಪೊಲೀಸರ‌ ವಶಕ್ಕೆ

ಬೆಂಗಳೂರು: ಡ್ರಗ್ಸ್ ‌ನಶೆಯಲ್ಲಿ ತೇಲುತ್ತಿದ್ದ ಕೆಲ ಬಾಲಿವುಡ್‌ ಮಂದಿಗೆ ಕಾಖಿ ಪಡೆ ನಶೆ ಇಳಿಸಿದೆ.

ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ದಿ ಪಾರ್ಕ್ ಫೈವ್ ಸ್ಟಾರ್ ಹೊಟೇಲ್ ನಲ್ಲಿ ಡ್ರಗ್ಸ್ ಪಾರ್ಟಿ ಭಾನುವಾರ ‌ತಡರಾತ್ರಿವರೆಗೂ ನಡೆದಿತ್ತು.

ಖಚಿತ ಮಾಹಿತಿ ಆಧರಿಸಿ ಹಲಸೂರು ಠಾಣೆ ಪೊಲೀಸರು‌ ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಬಾಲಿವುಡ್ ನಟ ಸಿದ್ದಾಂತ್ ಕಪೂರ್ ಹಾಗೂ ಅವರ ಸ್ನೇಹಿತರು ಡ್ರಗ್ಸ್ ಸೇವಿಸಿದುದು ದೃಢಪಟ್ಟಿದೆ.

ಹಾಗಾಗಿ ಸಿದ್ದಾಂತ್ ಸೇರಿದಂತೆ ಐದು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸಿದ್ದಾಂತ್ ಕಪೂರ್  ಬಾಲಿವುಡ್‌ ನಟಿ ಶ್ರದ್ಧಾ ಕಪೂರ್ ಸಹೋದರ‌ ಎಂದು ‌ತಿಳಿದುಬಂದಿದ್ದು ವಿಚಾರಣೆ ಮುಂದುವರಿದಿದೆ.