ಹುಬ್ಬಳ್ಳಿ: 2004 ರಿಂದ ದೇಶದಲ್ಲಿ ಭ್ರಷ್ಟಾಚಾರವನ್ನು ಅದರಲ್ಲೂ ರಾಜಕೀಯ ಭ್ರಷ್ಟಾಚಾರವನ್ನು ತೊಡೆದು ಹಾಕಿದ್ದು ಬಿಜೆಪಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಮೋದಿ ಸರ್ಕಾರ ಎಂಟು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ವಿಕಾಸ ತೀರ್ಪು ಯಾತ್ರೆ ಬೈಕ್ ರಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶವನ್ನು ಸಾಕಷ್ಟು ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಸಾಧನೆ ಏನು ಅಂತಾ ಗೊತ್ತು, ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ನಾಯಕ ಅವರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳಲ್ಲ ಎಂದು ಟೀಕಿಸಿದರು.
ರಫೇಲ್ ಹಗರಣದಲ್ಲಿ ಏನೇನೂ ಮಾಡಲು ಹೋದರು ಆದರೆ ಏನು ಮಾಡಲು ಆಗಲಿಲ್ಲ. ಸ್ವತ ಸುಪ್ರೀಂ ಕೋರ್ಟ್ ಇದನ್ನು ಸಾರಾಸಗಟವಾಗಿ ತಳ್ಳಿ ಹಾಕಿ ಹಗರಣದಲ್ಲಿ ಯಾವುದೇ ಹುರುಳಿಲ್ಲ ಅದು ಪಾರದರ್ಶಕವಾಗಿದೆ
ಎಂದು ಸ್ಪಷ್ಟವಾದ ಆದೇಶ ನೀಡಿತು.
ಈ ಬಗ್ಗೆ ಯಾರೇ ಏನೇ ಆರೋಪ ಮಾಡಲಿ ಆ ಬಗ್ಗೆ ಹೆಚ್ಚು ಮಹತ್ವ ಕೊಡುವುದು ಬೇಡಾ ಎಂದು ತಿಳಿಸಿದರು.
ಭಾರತದ ಪ್ರಧಾನಿ ನರೇಂದ್ರ ಮೋದಿ ಭಾರತ ದೇಶವನ್ನು ವಿಶ್ವ ಗುರುವನ್ನಾಗಿಸುತ್ತ ಅಹರ್ನಿಶಿ ಕಾರ್ಯ ನಿರ್ವಹಿಸುತ್ತಿದ್ದು ಇವರ ಈ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಸಲುವಾಗಿ ವಿಕಾಸ ತೀರ್ಥ ಬೈಕ್ ರಾಲಿ ಹಮ್ಮಿಕೊಳ್ಳಲಾಗಿದೆ ಎಂದರು.