ಮಂಗಳೂರು: ಸಮುದ್ರದಾಳದಲ್ಲಿ ಮುಳುಗುತ್ತಿದ್ದ ವಿದೇಶಿ ಹಡಗಿನಲ್ಲಿದ್ದ 15 ಮಂದಿ ಸಿರಿಯಾದ ನಾವಿಕರನ್ನು ಭಾರತೀಯ ಕರಾವಳಿ ಪಡೆ (ಐಸಿಜಿ) ರಕ್ಷಣೆ ಮಾಡಿದೆ.
ಈ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದೆ.
8,000 ಟನ್ ಉಕ್ಕಿನ ಸುರುಳಿ ತುಂಬಿದ್ದ ಸಿರಿಯಾದ ಎಂವಿ ಪ್ರಿನ್ಸೆಸ್ ಮಿರಲ್ ಹಡಗು ಚೀನಾದ ಟಿಯಾಂಜಿನ್‍ನಿಂದ ಲೆಬನಾನ್‍ನ ಬೈರುತ್‍ಗೆ ಪ್ರಯಾಣಿಸುತ್ತಿತ್ತು.
ಪ್ರಕೃತಿ ವಿಕೋಪದಿಂದಾಗಿ ಮಂಗಳೂರಿನಿಂದ ಆರು ನಾಟಿಕಲ್ ಮೈಲು ದೂರದಲ್ಲಿ ಹಡಗು ಮುಳುಗುವ ಹಂತದಲ್ಲಿತ್ತು.
ರಕ್ಷಣೆಗಾಗಿ ಹಿಂದೂ ಮಹಾಸಾಗರದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳ ನೋಡಲ್ ಏಜೆನ್ಸಿಯಾಗಿರುವ ಭಾರತೀಯ ಕೋಸ್ಟ್ ಗಾರ್ಡ್‍ಗೆ ಕರೆ ಬಂದಿದೆ.
ಇಂಯಹ ವಿಷಮ ಪರಿಸ್ಥಿತಿಯಲ್ಲೂ ಧೈರ್ಯದಿಂದ ಕಾರ್ಯಾಚರಣೆಗೆ ಇಳಿದ ಕರಾವಳಿ ಕಾವಲು ಪಡೆಯ ಯೋಧರು, ಸಾಹಸದಿಂದ 15 ಸಿರಿಯಾ ನಾವೀಕರನ್ನು ರಕ್ಷಿಸಿದ್ದಾರೆ.
ಈ ಕಾರ್ಯಾಚರಣೆ ಭಾರತೀಯ ಯೋಧರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಉಳ್ಳಾಲ ತೀರದಿಂದ ಐದರಿಂದ ಆರು ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಹಡಗು ಮುಳುಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಕಾರಿ ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.