ಪೂಜಾರಿಯೊಂದಿಗೆ ಪರಾರಿಯಾಗಿದ್ದ ಗೃಹಿಣಿ ಅತಂತ್ರ

ಮೈಸೂರು: ಹತ್ತು ದಿನಗಳ ಹಿಂದೆ ಅರ್ಚಕನ ಜತೆ ಪರಾರಿಯಾಗಿದ್ದ ಗೃಹಿಣಿ ಕಾಡಂಚಿನಲ್ಲಿ ಪತ್ತೆಯಾಗಿದ್ದಾಳೆ. 

21 ವರ್ಷದ ಅರ್ಚಕನ ಜೊತೆ ಪರಾರಿಯಾಗಿದ್ದ ಎರಡು ಮಕ್ಕಳ ತಾಯಿ ಈಗ ಅತಂತ್ರವಾಗಿದ್ದಾಳೆ.

ಬಾಳು ಕೊಡುವುದಾಗಿ ನಂಬಿಸಿ ಕರೆದೊಯ್ದ ಅರ್ಚಕ ಆಕೆಯೊಂದಿಗೆ ಹತ್ತು ದಿನ ಒಡನಾಟ ಬೆಳೆಸಿ ನಂತರ ಕಾಡಂಚಿನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಈ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

35 ವರ್ಷದ ಗೃಹಿಣಿ ಜೂನ್ 12 ರಂದು ತನ್ನ  ತಂದೆಯ ಮನೆಯಿಂದ ನಾಪತ್ತೆಯಾಗಿದ್ದಳು.

ಪರಿಹಾರ ಕೇಳಲು ಮಹದೇಶ್ವರನ ದೇವಸ್ಥಾನಕ್ಕೆ ಬಂದಾಗ 21 ವರ್ಷದ ಅರ್ಚಕ ಸಂತೋಷ್ ಈಕೆಯ ಜೊತೆ ಸಲುಗೆ ಬೆಳೆಸಿ

ಹೊಸ ಬಾಳು ಕೊಡುತ್ತೇನೆಂದು ನಂಬಿಸಿ  ಗೃಹಿಣಿಯನ್ನು ತನ್ನ ಜೊತೆ ಕರೆದೊಯ್ದಿದ್ದ.

ಹತ್ತು ದಿನಗಳ ಕಾಲ ಆಕೆಯೊಂದಿಗೆ  ತಿರುಗಾಡಿದ್ದ  ಸಂತೋಷ್ ಆತ್ಮಹತ್ಯೆ ನಾಟಕವಾಡಿ ಕಾಡಿಗೆ ಕರೆ ತಂದಿದ್ದ ನಂತರ ಮಧ್ಯರಾತ್ರಿಯಲ್ಲಿ ನಾಪತ್ತೆಯಾಗಿದ್ದ.

ಇಡೀ ರಾತ್ರಿ ಒಂಟಿಯಾಗಿ ಕಾಡಿನಲ್ಲಿ ಕಾಲ ಕಳೆದ ಗೃಹಿಣಿ ಮುಂಜಾನೆ ಸ್ಥಳೀಯರ ಕಣ್ಣಿಗೆ ಬಿದ್ದಿದ್ದಾಳೆ.

ಗೃಹಿಣಿಯ ಕಥೆ ಕೇಳಿದ ಗ್ರಾಮಸ್ಥರು ಹುಲ್ಲಹಳ್ಳಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೂಜಾರಿ ಸಂತೋಷ್ ನಾಪತ್ತೆಯಾಗಿದ್ದು,ಇತ್ತ ಗಂಡನ ಮನೆಯೂ ಇಲ್ಲ ಅತ್ತ ಬಾಳು ಕೊಡುವುದಾಗಿ ನಂಬಿಸಿದ್ದ ಸಂತೋಷ್ ಕೂಡ ಇಲ್ಲದೆ ಮಹಿಳೆ ಅತಂತ್ರವಾಗಿದ್ದಾಳೆ.

ಗೃಹಿಣಿ ತಾನು ಸಂತೋಷ್ ಜೊತೆಗೇ  ಇರುವುದಾಗಿ  ಪಟ್ಟು ಹಿಡಿದಿದ್ದು ಸಂತೋಷನ ಪತ್ತೆಗೆ ಹುಲ್ಲಹಳ್ಳಿ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.