ಕಿಟಕಿ ಗಾಜು ಒಡೆದು 6.56 ಲಕ್ಷ ಬೆಲೆಯ ಆಭರಣ ದೋಚಿದ ಕಳ್ಳರು

ಮೈಸೂರು: ಮನೆಯ ಕಿಟಕಿ ಗಾಜು ಒಡೆದು ಒಳ ನುಗ್ಗಿದ ಕಳ್ಳರು ನಾಲ್ಕು ಲಕ್ಷರೂ.ನಗದು ಸೇರಿದಂತೆ 6.56ಲಕ್ಷರೂ‌ ಬೆಲೆಯ ಚಿನ್ನಾಭರಣ ಕಳುವು ಮಾಡಿರುವ ಘಟನೆ ಮೈಸೂರು ತಾಲೂಕು ಮೂಗನಹುಂಡಿಯಲ್ಲಿ ನಡೆದಿದೆ.

ಮೂಗನಹುಂಡಿ ಗ್ರಾಮದ ಇಂಜಿನಿಯರ್ ಎಂ. ಚಂದ್ರ ಅವರು  ತಮ್ಮ ಕುಟುಂಬದವರ ಜೊತೆ ಜೂ.19ರಂದು ಮನೆಗೆ ಬೀಗ ಹಾಕಿ  ಸಹೋದರ ರವಿ ಅವರ ರಿಸೆಪ್ಶನ್ ನಿಮಿತ್ತ ಪರಸಯ್ಯನ ಹುಂಡಿಗೆ ತೆರಳಿದ್ದರು.

ರಾತ್ರಿ 12ಗಂಟೆ ಸುಮಾರಿಗೆ ಚಂದ್ರ ಅವರ ಸಂಬಂಧಿಕರು ಮನೆಗೆ ಮಲಗಲೆಂದು ಬಂದಾಗ ಮನೆಯ ಬಾಗಿಲ ಪಕ್ಕದಲ್ಲಿದ್ದ ಕಿಟಕಿ ಒಡೆದಿರುವುದು ಹಾಗೂ  ಸಾಮಾನುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ರುವುದು ಕಂಡು ಬಂದಿದೆ.

ಮಾಹಿತಿ ತಿಳಿದು ಮನೆಗೆ ಬಂದ ಚಂದ್ರ ಬೀರುವನ್ನು ಪರಿಶೀಲಿಸಿದಾಗ 6.56 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವುದು ಗೊತ್ತಾಗಿದೆ.

ಜಯಪುರ ಠಾಣೆಗೆ ಈ ಸಂಬಂಧ‌ ದೂರು ನೀಡಲಾಗಿದ್ದು ತನಿಖೆ ಪ್ರಾರಂಭವಾಗಿದೆ.