ನಾಗಮಂಗಲ: ಜೆಡಿಎಸ್‍ನವರು ಅವಕಾಶವಾದಿಗಳು, ಅವರನ್ನು ಗೆಲ್ಲಿಸುವುದರಿಂದ ಏನು ಪ್ರಯೋಜನವಿಲ್ಲ. ಚಲುವರಾಯಸ್ವಾಮಿ ಗೆದ್ದರೆ ನಾನು ಗೆದ್ದಂತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ತಾಲೂಕಿನ ದೇವಲಾಪುರ ಹೋಬಳಿ ಕೊಂಬಿನಕೊಪ್ಪಲು ಗ್ರಾಮದಲ್ಲಿ ನಡೆದ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಗ್ನಿವೀರರ ನೇಮಕದಿಂದ ಯುವಕರ ಭವಿಷ್ಯವನ್ನು ಕೇಂದ್ರ ಸರ್ಕಾರ ಹಾಳು ಮಾಡುತ್ತಿದೆ 17 ವರ್ಷದ ಯುವಕರನ್ನು ನೇಮಿಸಿ 5 ವರ್ಷದ ನಂತರ ತೆಗೆದು ಹಾಕುತ್ತಾರೆ.
ಆಗ ಅವರಿಗೆ 21 ವರ್ಷ ವಯಸ್ಸಾಗಿರುತ್ತದೆ. ಆ ಯುವಕರು ಮಾಜಿ ಸೈನಿಕರೂ ಅಲ್ಲ, ಪಿಂಚಣಿಯು ಇಲ್ಲ ಹಾಗಾಗುತ್ತದೆ ಅದಕ್ಕಾಗಿ ನಮ್ಮ ವಿರೋಧ ಎಂದು ಸಿದ್ದು ಹೇಳಿದರು.
ನಿಮ್ಮ ಆಶೀರ್ವಾದವೇ ನಮಗೆ ಶ್ರೀರಕ್ಷೆ. ಕುರ್ಚಿ ಸಿಗಲು ನಿಮ್ಮ ಆಶೀರ್ವಾದ ಬೇಕು. ನಾವು ವಿಧಾನಸೌಧಕ್ಕೆ ಹೋಗಲು ಚಲುವರಾಯ ಸ್ವಾಮಿಯನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.
ಎಚ್.ಡಿ.ದೇವೇಗೌಡರು ಇಲ್ಲಿ ಬಂದು ಅತ್ತು ಚಲುವರಾಯಸ್ವಾಮಿಯನ್ನು ಕಳೆದ ಬಾರಿ ಸೋಲಿಸಿದ್ದಾರೆ. ಮತ್ತೆ ಬಂದು ಕಣ್ಣೀರು ಹಾಕುತ್ತಾರೆ ಎಂದು ವ್ಯಂಗ್ಯವಾಡಿದರು.