ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ನಾಲೆಗೆ ಉರುಳಿದ ಪರಿಣಾಮ ಏಳು ಮಂದಿ ದುರ್ಮರಣ ಅಪ್ಪಿದ ಘಟನೆ ಭಾನುವಾರ ಬೆಳಗ್ಗೆ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳಿಗ್ಗೆ 7.30ರ ವೇಳೆ ಗೋಕಾಕ್‍ನಿಂದ ಬೆಳಗಾವಿಗೆ ಕ್ರೂಸರ್ ಬರುತ್ತಿತ್ತು.
ಅತಿ ವೇಗವಾಗಿ ಚಲಿಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ನಾಲೆಗೆ ಉರುಳಿಬಿದ್ದಿದೆ.
ಏಲು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಒಟ್ಟು 18 ಮಂದಿ ರೈಲುಹಳಿ ಜೋಡಣೆ ಕೆಲಸಕ್ಕೆಂದು ಅಕ್ಕತಂಗಿಯರ ಹಾಳದಿಂದ ಬಳ್ಳಾರಿಗೆ ಬರುತ್ತಿದ್ದರು.
ಕ್ರೂಸರ್‍ನ್ನು ಭೀಮೇಶ ಕುಂದರಗಿ ಎಂಬುವರು ಚಲಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಮಾರಿಹಾಳ ಠಾಣಾ ಪೊಲೀಸರು ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.