ಪತ್ನಿಯ ಕೊಂದು ರುಂಡ ಮುಂಡ ಬೇರ್ಪಡಿಸಿ ವಿಕೃತಿ ಮೆರೆದ ಪಾಪಿ ಪತಿ

ಮೈಸೂರು: ಪತಿಯೊಬ್ಬ ಪತ್ನಿಯ ಶೀಲ ಶಂಕಿಸಿ ಆಕೆಯ ರುಂಡ ಮುಂಡ ಕತ್ತರಿಸಿ ಭೀಕರವಾಗಿ ಕೊಲೆಗೈದಿರುವ ಘಟನೆ ಮೈಸೂರಿನ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚೆಟ್ಟನಹಳ್ಳಿ ಗ್ರಾಮದ ಪುಟ್ಟಮ್ಮ(40) ಕೊಲೆಯಾದ ಮಹಿಳೆ. ಪತ್ನಿಯನ್ನು ಕೊಂದ ಪಾಪಿ ದೇವರಾಜ್

ಮೊದಲ ಹೆಂಡತಿಯನ್ನೂ ಸಹ ದೇವರಾಜ್ ಕೊಲೆ ಮಾಡಲು ಯತ್ನಿಸಿ ಜೈಲು ವಾಸ ಅನುಭವಿಸಿದ್ದ.

ಇದೀಗ ಎರಡನೇ ಪತ್ನಿಯನ್ನೂ ಬಲಿ ಪಡೆದಿದ್ದಾನೆ ಈ ಪಾಪಿ.

ಮೊದಲ ಪತ್ನಿಯಿಂದ ದೂರವಾದ ದೇವರಾಜ್ 21 ವರ್ಷಗಳ ಹಿಂದೆ ಪುಟ್ಟಮ್ಮಳನ್ನು  ಎರಡನೇ ವಿವಾಹವಾಗಿದ್ದ.

ಎರಡನೇ ಮದುವೆ ಆದರೂ ಪುಟ್ಟಮ್ಮಳ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ. ಕಳೆದ ಒಂದು ತಿಂಗಳಿಂದ ಪುಟ್ಟಮ್ಮಳಿಗೆ ವಿಪರೀತ ಕಿರುಕುಳ ನೀಡುತ್ತಿದ್ದ.

ಮಗಳು ಪವಿತ್ರ ಕಾಲೇಜಿಗೆ ಹೋಗಿದ್ದ ವೇಳೆ ಶೀಲ ಶಂಕಿಸಿ ಕ್ಯಾತೆ ತೆಗೆದ ದೇವರಾಜ್ ಪತ್ನಿಯನ್ನು ಕೊಲೆ ಮಾಡಿ ರುಂಡ ಮುಂಡ  ಬೇರ್ಪಡಿಸಿ  ವಿಕೃತಿ ಮೆರೆದಿದ್ದಾನೆ.

ತಂದೆ ದೇವರಾಜ್ ವಿರುದ್ಧ ಮಗಳು ಪವಿತ್ರ ವರುಣಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ದೇವರಾಜ್ ಬಂಧನಕ್ಕೆ ಬಲೆ ಬೀಸಿದ್ದಾರೆ.