ಮೂರು ದಿನದಲ್ಲಿ ಮೂವರು ಪೊಲೀಸರ ಅಮಾನತ್ತು

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಕರ್ತವ್ಯದಲ್ಲಿ ತೀವ್ರ ಅಶಿಸ್ತು, ದುರ್ನಡತೆ ಮತ್ತು ಕರ್ತವ್ಯಲೋಪವೆಸಗಿರುವ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲಾ ಪೆÇಲೀಸ್ ಅಧೀಕ್ಷಕರು ಮೂವರು ಇಲಾಖಾ ಸಿಬ್ಬಂದಿಗಳನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಚಾಮರಾಜನಗರ ಜಿಲ್ಲಾ ಪೆÇಲೀಸ್ ಸಶಸ್ತ್ರ ಮೀಸಲು ಎ.ಆರ್.ಎಸ್.ಐ. ಹಾಗೂ ಇಬ್ಬರು ಪೇದೆಗಳು ಸೇರಿ ಮೂವರನ್ನ ಜಿಲ್ಲಾ ಪೆÇಲೀಸ್ ಅಧೀಕ್ಷಕ ಶಿವಕುಮಾರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಸಶಸ್ತ್ರ ಮೀಸಲು ಪಡೆಯ ಎಆರ್‍ಎಸ್‍ಐ ನಾಗೇಂದ್ರ, ಪೇದೆಗಳಾದ ನವೀನ್ ಮತ್ತು ಶಂಕರ್ ಎಂಬುವವರು ಅಮಾನತ್ತದ ಪೊಲೀಸ್ ಸಿಬ್ಬಂದಿಗಳಾಗಿದ್ದಾರೆ.

ಸಶಸ್ತ್ರ ಮೀಸಲು ಪಡೆಯ ಎಆರ್‍ಎಸ್‍ಐ ನಾಗೇಂದ್ರ ಚಾಮರಾಜನಗರ ಜಿಲ್ಲಾ ಕೇಂದ್ರಸ್ಥಾನಕ್ಕೆ ಮದ್ಯಪಾನ ಮಾಡಿಕೊಂಡು ಬಂದು, ಕರ್ತವ್ಯದ ವೇಳೆ ಅವಾಚ್ಯ ಶಬ್ಬಗಳಿಂದ ಬೈಯ್ದದ್ದನ್ನ ಪರಿಗಣಿಸಿದ ಮೇಲಾಧಿಕಾರಿಗಳು ಕರ್ತವ್ಯದಲ್ಲಿ ತೀವ್ರ ಅಶಿಸ್ತು, ದುರ್ನಡತೆ ಮತ್ತು ಕರ್ತವ್ಯಲೋಪವೆಸಗಿರುವ ಹಿನ್ನಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತು ಮಾಡಲಾಗಿತ್ತು.

ಚಾಮರಾಜನಗರ ಉಪ ವಿಭಾಗ ಕಛೇರಿಯಲ್ಲಿ ಕರ್ತವ್ಯ ನಿರ್ವಹಣೆಯ ಮಾಡುತ್ತಿರುವ ನವೀನ್ ಎಂಬ ಪೇದೆ ಯಾವುದೇ ಪೂರ್ವಾನುಮತಿಯನ್ನು ಪಡೆಯದೇ ಕರ್ತವ್ಯಕ್ಕೆ ಗೈರು ಹಾಜರಾಗಿದ್ದು, ಕರ್ತವ್ಯವನ್ನು ಸದುರ್ಪಕವಾಗಿ ನಿರ್ವಹಿಸದೆ, ಬೇಜವಬ್ದಾರಿತನದಿಂದ ವರ್ತಿಸಿ, ಆಗಾಗ್ಗೆ ಕರ್ತವ್ಯಕ್ಕೆ ನಿಗಧಿತ ಸಮಯಕ್ಕೆ ಹಾಜರಾಗದೆ ಇದ್ದುದ್ದನ್ನ ಪರಿಗಣಿಸಿ ಅಮಾನತು ಮಾಡಲಾಗಿದೆ.

ಮತ್ತೊಬ್ಬ ಪೇದೆ ಶಂಕರ್ ಎಂಬುವವರು ಯಳಂದೂರು ತಾಲ್ಲೂಕಿನ ಗುಂಬಳ್ಳಿ ಗ್ರಾಮದ ರಂಜಿತಾ ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಕೊಲೆ ಬೆದರಿಕೆಯನ್ನು ಹಾಕಿರುವ ಆರೋಪದ ಮೇರೆಗೆ ಸೇವೆಯಿಂದ ಅಮಾನತ್ತು ಮಾಡುವ ಬಗ್ಗೆ ಹಲವಾರು ಬಾರಿ ಮೌಖಿಕವಾಗಿ ಸೂಕ್ತ ಸಲಹೆ, ಸೂಚನೆಗಳನ್ನು ನೀಡಿ, ಎಚ್ಚರಿಸಿದ್ದರೂ ಕ್ಯಾರೆ ಎನ್ನಲಿಲ್ಲ. ಕರ್ತವ್ಯದಲ್ಲಿ ತೀವ್ರ ಅಶಿಸ್ತು, ಬೇಜವಾಬ್ದಾರಿತನ ಮತ್ತು ಕರ್ತವ್ಯಲೋಪವೆಸಗಿರುವ ಹಿನ್ನಲೆಯಲ್ಲಿ ಪೆÇಲೀಸ್ ಅಧೀಕ್ಷಕರಾದ ಶಿವಕುಮಾರ್ ಅಮಾನತ್ತು ಆದೇಶ ಹೊರಡಿಸಿದ್ದಾರೆ.