ತಲೆ ಕೂದಲು ಉದುರಿಹೋದುದಕ್ಕೆ ಯುವತಿ ಆತ್ಮಹತ್ಯೆ

ಮೈಸೂರು: ತಲೆ ಕೂದಲು ಬಹಳ ಉದುರುತ್ತಿದೆ ಎಂದು  ಮನನೊಂದ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ರಾಘವೇಂದ್ರ ನಗರ ಬಡಾವಣೆಯಲ್ಲಿ ನಡೆದಿದೆ.

ಕಾವ್ಯಶ್ರೀ(22) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಕಳೆದ ಹಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ  ಬಳಲುತ್ತಿದ್ದ ಕಾವ್ಯಶ್ರೀಗೆ ಕೂದಲು ಬಹಳ ಉದುರುತ್ತಿತ್ತು.

ಚಿಕಿತ್ಸೆ ಪಡೆದರೂ ಕೂದಲು ಉದುರುವುದು ನಿಂತಿರಲಿಲ್ಲ.

ಸಂಪೂರ್ಣವಾಗಿ ಕೂದಲು ಉದುರಿಹೋದ  ಕಾರಣ ಬೇಸತ್ತ ಕಾವ್ಯಶ್ರೀ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈ ಸಂಬಂಧ ನಜರಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.