ನಕಲಿ ಕೀ ಬಳಸಿ ಕಳವು ಮಾಡುತ್ತಿದ್ದ ಕತರ್ನಾಕ್ ಕಳ್ಳಿ ಬಂಧನ

ಮೈಸೂರು: ಮನೆಗಳಲ್ಲಿ ನಕಲಿ ಕೀ ಬಳಸಿ ಕಳ್ಳತನಮಾಡುತ್ತಿದ್ದ ಕತರ್ನಾಕ್ ಕಳ್ಳಿಯನ್ನು ಮೈಸೂರಿನ ಆಲನಹಳ್ಳಿ ಠಾಣೆ ಪೊಲೀಸರು  ಬಂಧಿಸಿದ್ದಾರೆ.
ಪ್ರಭಾಮಣಿ(42) ಬಂಧಿತ ಮನೆಕಳ್ಳಿ.
ಬಂಧಿತಳಿಂದ ಪೊಲೀಸರು ನಗದು ಸೇರಿದಂತೆ 11.94 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ತನ್ನ ಮನೆಯ ಅಕ್ಕಪಕ್ಕದವರನ್ನ ಪರಿಚಯಿಸಿಕೊಳ್ಳುತ್ತಿದ್ದ ಪ್ರಭಾಮಣಿ ಬೀಗದ ಕೀಗಳನ್ನು ಕದ್ದು ನಕಲಿ ಮಾಡಿಸಿಕೊಂಡು ನಂತರ ಅದೇ ಜಾಗದಲ್ಲಿ ಇರಿಸುತ್ತಿದ್ದಳು.
ನಂತರ ಮನೆಯವರು ಹೊರಗೆ ಹೋಗಿದ್ದ ವೇಳೆ ಹೊಂಚುಹಾಕಿ ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದಳು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.
ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಮನೆಗಳಲ್ಲಿ ನಕಲಿ ಕೀ ಬಳಸಿ ಕಳವು ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಬಾಯಿಬಿಟ್ಟಿದಗದಾಳೆ.
ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿ ಗೀತಾಪ್ರಸನ್ನ ರವರ ಮಾರ್ಗದರ್ಶನದಲ್ಲಿ ಎಸಿಪಿ ಶಶಿಧರ್ ಉಸ್ತುವಾರಿಯಲ್ಲಿ ಆಲನಹಳ್ಳಿ ಠಾಣೆ ಇನ್ಸ್ ಪೆಕ್ಟರ್ ಶ್ರೀಕಾಂತ್ ನೇತೃತ್ವದಲ್ಲಿ  ಕಾರ್ಯಾಚರಣೆ ನಡೆದಿದೆ.
ಆಲನಹಳ್ಳಿ ಠಾಣೆಯ ಪಿಎಸ್ಸೈ ಮಹೇಂದ್ರ,ಪ್ರವೀಣ್ ಕುಮಾರ್,ಎಎಸ್ಸೈ ಲಕ್ಷ್ಮೀನಾರಾಯಣ್, ಸಿಬ್ಬಂದಿಗಳಾದ ಶಿವಪ್ರಸಾದ್, ಚೌಡಪ್ಪ, ಸುಂದರಿ,ಸುಹೀಲ್,ರಂಗನಾಥ್,ರುಕ್ಮಿಣಿ,ಯಂಕವ್ವ ಜಗದಾಳೆ,ಶೋಭಾ,ಅನಿತಾ,ರಂಜಿತಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.