ಒಬ್ಬನ ಬಲಿ ಪಡೆದ ಮೀಟರ್ ಬಡ್ಡಿ ದಂಧೆ!

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ: ಮೀಟರ್ ಬಡ್ಡಿ ಕಿರುಕುಳಕ್ಕೆ ಯುವಕನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಪಟ್ಟಣದ ನಿವಾಸಿ ಕಾರ್ತಿಕ್(31) ಮೀಟರ್ ಬಡ್ಡಿಗೆ ಸಿಲುಕಿ ನೇಣಿಗೆ ಶರಣಾದ ದುರ್ದೈವಿ ಯುವಕ.

ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದ ಯುವಕ ಮೀಟರ್ ಬಡ್ಡಿದಾರರಿಂದ ಸಾಲದ ರೂಪದಲ್ಲಿ ಹಣ ಪಡೆದಿದ್ದ. ಹಣಕ್ಕಿಂತಲೂ ದುಪ್ಪಟ್ಟು ಬಡ್ಡಿ ಏರಿದ ಕಾರಣಕ್ಕೆ ಹಣ ಕೊಡುವಂತೆ ಶುಕ್ರವಾರ ರಾತ್ರಿ ಯುವಕನ ಮನೆಯ ಮುಂದೆ ಸಾಲ ನೀಡಿದವರು ಬಂದು ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.

ಇದರಿಂದ ಬೇಸತ್ತ ಕಾರ್ತಿಕ್ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಡೆತ್ ನೋಟ್ ಆಧಾರದಲ್ಲಿ ಹಾಗೂ ಮೃತನ ಅಣ್ಣ ನೀಡಿದ ದೂರಿನ ಮೇರೆಗೆ ಪ್ರದೀಪ್, ರವಿ, ಸುಭಾಷ್, ನಂದಿ ಎಂಬ ನಾಲ್ವರ ವಿರುದ್ಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಲಾಗಿದೆ.